ಬೆಳಗಾವಿ : ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನಲೆ ಕೊಯ್ನಾ ಜಲಾಶಯಕ್ಕೆ ನೀರಿನ ಹೊರಹರಿವು ಹೆಚ್ಚಳವಾಗಿದ್ದು, ಕೃಷ್ಣಾ ನದಿ (Krishna River) ತುಂಬಿ ಹರಿಯುತ್ತಿದೆ. ಪರಿಣಾಮ ಬೆಳಗಾವಿ (Belagavi) ನದಿ ಪಾತ್ರದಲ್ಲಿದ್ದ ಸುಮಾರು ಗರ್ಬಿಣಿ ಸೇರಿದಂತೆ ಸುಮಾರು 40 ಕುಟುಂಬ ಸಿಲುಕಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಕಳೆದ ಕೆಲ ದಿನಗಳಿಂದ ವರುಣ ಆರ್ಭಟಿಸುತ್ತಿದ್ದಾನೆ, ಈ ಹಿನ್ನಲೆ ಕೃಷ್ಣ ನದಿ ಉಕ್ಕಿ (Flooded) ಹರಿಯುತ್ತಿದೆ. ಅಷ್ಟೇ ಅಲ್ಲದೆ ಚಿಕ್ಕೋಡಿಯ ಉಪವಿಭಾಗದ ಕೃಷ್ಣ, ದೂದ ಗಂಗಾ, ವೇದಗಂಗಾ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಇತ್ತ ಬೆಳಗಾವಿಯಲ್ಲಿ ಕೂಡ ಭಾರೀ ಮಳೆಯುತ್ತಿರುವ ಹಿನ್ನಲೆ ಅಥಣಿ ತಾಲೂಕಿನ ಹುಲಗಬಾಳ ಗ್ರಾಮದ ಮಾಂಗ ವಸತಿ ಪ್ರದೇಶವು ಸಂಪೂರ್ಣ ಜಲಾವೃತವಾಗಿದೆ. ಇದರಿಂದ ನೂರಾರು ಕುಟುಂಬ, ಜಾನುವಾರುಗಳು ನದಿಯ ನಡುಗಡ್ಡೆಯಲ್ಲೇ ಸಿಲುಕಿಕೊಂಡಿದ್ದಾರೆ.
ಕೃಷ್ಣಾ ನದಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಪರಿಣಾಮ ಜಿಲ್ಲೆಯ ದೇವದುರ್ಗ ಮಾರ್ಗವಾಗಿ ಕಲಬುರಗಿಗೆ ಸಂಪರ್ಕ ಕಲ್ಪಿಸುವ ಹೂವಿನಹೆಡಗಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ದೇವದುರ್ಗ ತಾಲೂಕು ಆಡಳಿತವು ಬುಧವಾರ ಸಂಜೆಯಿಂದಲೇ ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಿದೆ.
ಕಳೆದ ಕೆಲದಿನಗಳಿಂದ ಬಿಡದೆ ಮಳೆ ಸುರಿದ ಪರಿಣಾಮ ಗ್ರಾಮಕ್ಕೆ ನದಿಯ ನೀರು ನುಗ್ಗಿದೆ. ಈಗಾಗಲೇ ಗ್ರಾಮಕ್ಕೆ ಸಂಪರ್ಕಿಸುತ್ತಿದ್ದ ಏಕೈಕ ರಸ್ತೆಯಲ್ಲಿ ಕೂಡ ಎದೆಯ ಮಟ್ಟಕ್ಕೆ ನೀರು ಬಂದಿದ್ದು, ಜನರ ನದಿಯ ನಡುವೆಯೇ ಸಿಲುಕಿಕೊಂಡಿದ್ದಾರೆ.
ಇಡೀ ಗ್ರಾಮವೇ ಸಂಪೂರ್ಣ ಜಲಾವೃತವಾಗಿದ್ದರೂ ಕೂಡ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಇನ್ನೂ ಕೂಡ ಸ್ಥಳಕ್ಕೆ ಆಗಮಿಸಿಲ್ಲ. ಅಷ್ಟೇ ಅಲ್ಲದೆ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಾಕಷ್ಟು ಬೋಟ್ ಗಳನ್ನು ತರಿಸಲಾಗಿದ್ದರೂ ಕೂಡ ಒಂದೇ ಒಂದು ಬೋಟ್ ಗಳನ್ನು ಕೂಡ ಕಳುಹಿಸಿಕೊಟ್ಟಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.




