Ad imageAd image

ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ

Bharath Vaibhav
ಡಿ.ದೇವರಾಜ ಅರಸು ಅವರ 110ನೇ ಜನ್ಮದಿನಾಚರಣೆ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ಶ್ರೀ ಅಭಯಾಂಜನೇಯ್ಯ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಡಿ.ದೇವರಾಜು ಅರಸು ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ತಹಶೀಲ್ದಾರ್ ಗೌಸಿಯಾ ಬೇಗಂ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ಹಿಂದುಳಿದ ವರ್ಗಗಳ ನೇತಾರ, ಸಾಮಾಜಿಕ ನ್ಯಾಯದ ಹರಿಕಾರ, ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾಗಿರುವ ಅರಸು ಅವರು ಹಾಕಿಕೊಟ್ಟ ಯೋಜನೆಗಳ ಸದುಪಯೋಗ ಪಡೆದಕೊಂಡು ಹೊಂದಬೇಕೆಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಮಾತನಾಡಿ 1973 ನವೆಂಬರ್ 1ರಂದು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿ ನಾಮಕರಣ ಮಾಡಿದ ಕೀರ್ತಿ ದೇವರಾಜು ಅರಸು ಅವರಿಗೆ ಸಲ್ಲುತ್ತದೆ.
ಅಂದು ಮಾಡಿದ ದೃಡ ನಿರ್ಧಾರದಿಂದಾಗಿ ಭೂರಹಿತ ಬಡವರ್ಗದವರು ಜಮೀನು ಹೊಂದಲು ಸಾಧ್ಯವಾಯಿತು. ರಾಜ್ಯದಲ್ಲಿ 10ಸಾವಿರಕ್ಕೂ ಅಧಿಕ 1ಲಕ್ಷ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ನಮ್ಮ ತಾಲೂಕಿನಲ್ಲಿ ಒಟ್ಟು 13 ವಿದ್ಯಾರ್ಥಿ ನಿಲಯಗಳಿದ್ದು, ಅದರಲ್ಲಿ 10 ನಿಲಯಗಳು ಸ್ವಂತ ಕಟ್ಟಡದಲ್ಲಿ ಹಾಗೂ 3 ಬಾಡಿಗೆ ಕಟ್ಟಡದಲ್ಲಿವೆ.

ತಾಲೂಕಿಗೆ ದೇವರಾಜು ಅರಸು ಭವನದ ಕಟ್ಟಡ ಹಾಗೂ ಇಂಜಿನಿಯರ್ ಕಾಲೇಜಿನ ಅವಶ್ಯಕತೆಯಿದ್ದು ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇಲ್ಲಿನ ಬೇಡಿಕೆಗಳನ್ನು ಈಡೇರಿಸಬೇಕಿದೆಂದರು.

ವಾಲ್ಮೀಕಿ ವಿದ್ಯಾಭಿವೃದ್ದಿ ಟ್ರಸ್ಟಿನ ತಾಲೂಕಾಧ್ಯಕ್ಷ ಬಿ.ಎಮ್.ಸತೀಶ ಅವರು ಮಾತನಾಡಿ ಈ ಹಿಂದೆ ಕೇವಲ ಶೇ.3ರಷ್ಟು ಜನರು ಶೇ.97ರಷ್ಟು ಜನಾಂಗದ ಹಿಂದುಳಿದ ಸಮಾಜವನ್ನು ಆಳುವಂತಹ ಸಂಧರ್ಭ ಅಂದಿನ ಕಾಲದಲ್ಲಿತ್ತು.
ಅರಸು ಅವರು ಮುಖ್ಯಮಂತ್ರಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಬಡವರ ಪಾಲಿನ ಆಶಾಕಿರಣವಾಗಿದ್ದಾರೆ ಎಂದರು.

ತೆಕ್ಕಲಕೋಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ದೊಡ್ಡಬಸಪ್ಪ ಅವರು ತಮ್ಮ ವಿಶೇಷ ಉಪನ್ಯಾಸದಲ್ಲಿ ದೇವರಾಜು ಅರಸು ಅವರ ಸಾಧನೆಗಳಾದ ಭಾಗ್ಯಜ್ಯೋತಿ ಯೋಜನೆ, ಜೀತಪದ್ದತಿ, ಮಲ ಹೋರುವ ಪದ್ದತಿಗಳ ನಿಷೇಧ, ಊಳುವವನೇ ಭೂಮಿಯ ಒಡೆಯ ಕಾಯ್ದೆ, ಎಲ್.ಜಿ.ಹಾವನೂರು ಆಯೋಗ ನೇಮಕ ಕುರಿತಂತೆ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ನಗರಸಭೆ ಅಧ್ಯಕ್ಷೆ ಬಿ.ರೇಣುಕಮ್ಮ, ಉಪಾಧ್ಯಕ್ಷೆ ಯಶೋದಾಮೂರ್ತಿ, ಸದಸ್ಯರಾದ ಹೆಚ್.ಗಣೇಶ, ಮೀರಾಹುಸೇನ್, ತಾಲೂಕು ಪಂಚಾಯಿತಿ ಇ.ಓ ಪವನ್‌ಕುಮಾರ್.ಎಸ್.ದಂಡಪ್ಪನವರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಮ್.ಸಿದ್ದಯ್ಯ, ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಹುಚ್ಚೀರಪ್ಪ, ಕಾರ್ಯದರ್ಶಿ ಚಂದ್ರಕಾಂತ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್.ಕರಿಬಸಪ್ಪ, ವಿವಿಧ ಸಮಾಜದ ಪದಾಧಿಕಾರಿಗಳು ಹಾಗೂ ಮುಖಂಡರಾದ ಬಾಲಸುಬ್ಬಯ್ಯ, ದಮ್ಮೂರು ಸೋಮಪ್ಪ, ಹನುಮಂತಪ್ಪ, ಗಾಳೆಪ್ಪ, ಮೌನೇಶ ಆಚಾರಿ, ಕಾಳನಗೌಡ, ಬಿ.ಸಣ್ಣ ರಾಮಯ್ಯ, ಹಾಗೂ ಹಿಂದುಳಿದ ವರ್ಗಗಳ ನಿಲಯ ಪಾಲಕರು ಸಿಬ್ಬಂದಿಗಳು, ವಿದ್ಯಾರ್ಥಿಗಳಿದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!