ಐಗಳಿ: ಶ್ರಾವಣ ಮಾಸದ ನಿಮಿತ್ತ ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದ ಸದಾಶಿವ ಮುತ್ಯಾ ಬಬಲಾದಿ ಮಠದ ಜಾತ್ರಾ ಮಹೋತ್ಸ ಅದ್ದೂರಿಯಾಗಿ ಜರುಗಿತು. ಗ್ರಾಮ ದೇವರಾದ ಶ್ರೀ ಅಪ್ಪಯ್ಯ ಸ್ವಾಮಿಗಳು ಕಡೆ ಸೋಮವಾರದಂದು ಜಮಖಂಡಿ ತಾಲೂಕಿನ ತುಬಚಿ ಗ್ರಾಮದ ಕೃಷ್ಣಾ ನದಿಯ ಸ್ನಾನಕ್ಕೆ ತೆರಳಿತು ಬುಧವಾರ ಸಂಜೆ ಐಗಳಿ ಗ್ರಾಮಕ್ಕೆ ಆಗಮಿಸಿತು ಗ್ರಾಮದ ಭಕ್ತರು ರಸ್ತೆ ಉದ್ದಕ್ಕೂ ರಂಗೋಲಿ ಹಾಕಿ ವಿವಿಧ ವಾದ್ಯಮೇಳದೊಂದಿಗೆ ಸಡಗರ ಸಂಭ್ರಮದಿಂದ ಪಟಾಕಿ ಸಿಡಿಸಿ ಮೆರವಣಿಗೆ ಮೂಲಕ ಸ್ವಾಗತಿಸಿದರು.

ಗ್ರಾಮದ ಭಕ್ತರಾದ ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಯಲ್ಲಪ್ಪ ಮಿರ್ಜಿ ಹಾಗೂ ಅವರ ಕುಟುಂಬಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು ರಾತ್ರಿ ಅನ್ನ ಪ್ರಸಾದ ಅರ್ಪಿಸಿದರು ನಂತರ ಜೇವರ್ಗಿ ನಾಟ್ಯ ಸಂಘ ಕಲಾವಿದರಿಂದ ಸತ್ಯ ಸತ್ತಿಲ್ಲ ಎಂಬ ಸುಂದರ ಸಾಮಾಜೀಕ ಕಂಪನಿ ನಾಟಕ ಜರುಗಿತು.

ಗುರುವಾರ ಮುಂಜಾನೆ ಅಪ್ಪಯ್ಯ ಸ್ವಾಮಿಗಳ ಪಲ್ಲಕ್ಕಿಯು ದೇವಸ್ಥಾನಕ್ಕೆ ತಲುಪಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಸಿ ಎಸ್ ನೇಮಗೌಡ ಶಿವಾನಂದ ಸಿಂಧೂರ ಮುಖಂಡರಾದ ಅಪ್ಪಸಾಬ ಪಾಟೀಲ ಗುರಪ್ಪ ಬಿರಾದರ ಬೈರು ಬಿಜ್ಜರಗಿ ಗ್ರಾ ಪಂ. ಸದಸ್ಯರಾದ ರವೀಂದ್ರ ಹಾಲಳ್ಳಿ ಸುರೇಶ ಬಿಜ್ಜರಗಿ ಶ್ರೀಸೈಲ ಮಿರ್ಜಿ ಸೇರಿದಂತೆ ಗ್ರಾಮದ ಸರ್ವ ಭಕ್ತರು ಆಗಮಿಸಿ ದೇವ ದರ್ಶನ ಪಡೆದರು.




