ಸೇಡಂ: ತಾಲೂಕಿನ ಮಲ್ಕಪಲ್ಲಿ ಗ್ರಾಮದಲ್ಲಿ ಸುಮಾರು ಸಾರ್ವಜನಿಕ ಕಟ್ಟಡಗಳಿದ್ದು ಅವುಗಳು ಸಾರ್ವಜನಿಕರಿಗೆ ಉಪಯೋಗವಿಲ್ಲ ಎಂದು ಗ್ರಾಮದ ಮುಖಂಡರು ವಿನೋದ್ ಸಾಹುಕಾರ್ ಹೇಳಿದರು.
ಈ ಕುರಿತು ತಾಲೂಕ ದಂಡಾದಿಕರಿಗಳಾದ ಶ್ರೀಮತಿ ಶ್ರೇಯಾಂಕ ಧನುಶ್ರೀ ಅವರಿಗೆ ಮಲ್ಕಪಲ್ಲಿ ಗ್ರಾಮದಲ್ಲಿ ಸರ್ವೇ ನಂಬರ್ 154/1 ರಲ್ಲಿ 2ಎಕರೆ ಜಾಗವನ್ನು ಸಾರ್ವಜನಿಕ ಸ್ಮಶಾನದ ಸಲುವಾಗಿ ಸರ್ವೇ ಮಾಡಿಸಿ ಸಾರ್ವಜನಿಕರಿಗೆ ಹಸ್ತಾಂತರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.

ಗ್ರಾಮದಲ್ಲಿ ಒಟ್ಟು 2000 ಜನಸಂಖ್ಯೆಯಿದ್ದು, ಯಾವುದೇ ಸ್ಮಶನವಿಲ್ಲದ ಕಾರಣ ನಿರಾಶ್ರಿತರಿಗೆ ಶವವನ್ನು ಹೂಳಲು ಸಾಕಷ್ಟು ತೊಂದರೆಯಾಗುತ್ತಿದೆ. ಹಾಗಾಗಿ ಸದರಿ ಸ್ಥಳದಲ್ಲಿ ಸ್ಮಶನಕ್ಕಾಗಿ 2ಎಕರೆ ಬಿಟ್ಟುಕೊಡಬೇಕು ಎಂದು ಮನವಿ ಮಾಡಿ. ಅದೇ ರೀತಿ ನಮ್ಮ ಊರಿನಲ್ಲಿ ಸುಮಾರು ಸಾರ್ವಜನಿಕ ಕಟ್ಟಡಗಳು ಇದ್ದು ಅವುಗಳನ್ನು ಖಾಸಗಿ ವ್ಯಕ್ತಿಗಳು ಬಳಸುತ್ತಿದ್ದು ಅವುಗಳನ್ನು ಕೂಡಲೇ ಖಾಲಿ ಮಾಡಿಸಿ ಆ ಕಟ್ಟಡಗಳನ್ನು ಸಾರ್ವಜನಿಕರಿಗೆ ಉಪಯೋಗವಾಗುವಂತೆ ಮಾಡಿಕೊಡಬೇಕು ಎಂದು ಹೇಳಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




