ಮೆಕ್ಕೈ( ಆಸ್ಟ್ರೇಲಿಯಾ): ಪ್ರವಾಸಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿ ನಡೆದಿರುವ ದ್ವಿತೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 37 ಓವರುಗಳಲ್ಲಿ 5 ವಿಕೆಟ್ ಗೆ 204 ರನ್ ಗಳಿಸಿತ್ತು.
ಟ್ರೀಸ್ಟ್ಆನ್ ಸ್ಟಬಸ್ 63 ಹಾಗೂ ವೇನ್ ಮಲ್ಡರ್ 6 ರನ್ ಗಳಿಸಿ ಬ್ಯಾಟ್ ಮಾಡುತ್ತಿದ್ದರು. ದಕ್ಷಿಣ ಪರವಾಗಿ ಮ್ಯಾಥ್ಯೂ ಬ್ರೆಡ್ಜೆಕೆ 88 ರನ್ ಗಳಿಸಿದರು. ಇದಕ್ಕೆ ಮುನ್ನ ದಕ್ಷಿಣ ಆಫ್ರಿಕಾ ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಜಯಗಳಿಸಿತ್ತು.




