
ನವದೆಹಲಿ: ಸೆ. 9 ರಿಂದ 28 ರವರೆಗೆ ಯುನೈಟೆಡ್ ಅರಬ್ ಎಮಿರೆಟ್ಸ್ ನಲ್ಲಿ ಟ್ವೆಂಟಿ-20 ಮಾದರಿಯಲ್ಲಿ ಏಷಿಯಾ ಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಈ ಪ್ರತಿಷ್ಠಿತ ಪಂದ್ಯಾವಳಿಗೆ ಭಾರತ, ಪಾಕಿಸ್ತಾನ ತಂಡಗಳ ಆಯ್ಕೆ ಸಂಪೂರ್ಣಗೊಂಡಿದ್ದು, ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯುವ ವಿಶ್ವ ಟ್ವೆಂಟಿ-20 ಪಂದ್ಯಾವಳಿಗೆ ಪ್ರಮುಖ ವೇದಿಕೆಯಾಗಿದೆ ಎಂದು ಬಣ್ಣಿಸಲಾಗುತ್ತಿದೆ.

ಈ ಪಂದ್ಯಾವಳಿಗೆ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಸೂರ್ಯಕುಮಾರ್ ಯಾದವ್ ತಂಡದ ಸಾರಥ್ಯ ವಹಿಸುವರು. ಶುಭಮಾನ್ ಗಿಲ್ ಉಪನಾಯಕರಾಗಿದ್ದಾರೆ. ತಂಡದ ಉಳಿದ ಸದಸ್ಯರಲ್ಲಿ ಅಭಿಷೇಕ ಶರ್ಮಾ, ತಿಲಕ್ ವರ್ಮಾ, ಹಾರ್ಧಿಕ ಪಾಂಡ್ಯಾ, ಶಿವಂ ದುಬೈ, ಅಕ್ಷರ ಪಟೇಲ್, ಜಿತೇಶ್ ಶರ್ಮಾ( ವಿಕೆಟ್ ಕೀಪರ್ ಬ್ಯಾಟರ್), ಜಸ್ಪ್ರೀತ್ ಬೂರ್ಮಾ, ಅರ್ಷದೀಪ್ ಸಿಂಗ್, ವರುಣ್ ಚರ್ಕವರ್ತಿ, ಕುಲದೀಪ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹರ್ಷಿತ್ ರಾಣಾ ಹಾಗೂ ರಿಂಕು ಸಿಂಗ್.




