Ad imageAd image

ಪ್ರವಾಹಕ್ಕೆ ಮುಧೋಳ-ಯಾದವಾಡ ಸೇತುವೆ ಮುಳುಗಡೆ : 23 ಹಳ್ಳಿಗಳ ಸಂಪರ್ಕ ಕಡಿತ

Bharath Vaibhav
ಪ್ರವಾಹಕ್ಕೆ ಮುಧೋಳ-ಯಾದವಾಡ ಸೇತುವೆ ಮುಳುಗಡೆ : 23 ಹಳ್ಳಿಗಳ ಸಂಪರ್ಕ ಕಡಿತ
WhatsApp Group Join Now
Telegram Group Join Now

ಬಾಗಲಕೋಟೆ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಘಟಪ್ರಭಾ ನದಿ ಅಪಾಯದಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು, ಹಲವು ಪ್ರದೇಶಗಳು ಜಲಾವೃತಗೊಂಡಿವೆ.

ಘಟಪ್ರಭಾ ಪ್ರವಾಹಕ್ಕೆ ಮುಧೋಳ-ಯಾದವಾಡ ರಾಜ್ಯ ಹೆದ್ದಾರಿ ಮೇಲಿನ ಸೇತುವೆ ಮುಳುಗಡೆಯಾಗಿದೆ.ಸೇತುವೆ ಮೇಲಿಂದ ನೀರು ಹರಿಯುತ್ತಿದ್ದು ವಾಹನ ಸಂಚಾರ ಸ್ಥಗಿತಗೊಂಡಿದೆ.

ಸೇತುವೆ ಮುಳುಗಡೆಯಾಗಿರುವ ಹಿನ್ನೆಲೆಯಲ್ಲಿ ಉತ್ತೂರ, ಮಿರ್ಜಿ, ಮಾಲಾಪುರ, ಒಂಟಗೋಡಿ, ರಂಜನಗಿ, ರೂಗಿ, ಗುಲಗಾಲ ಜಂಬರಗಿ, ಮೇಟಗುಡ್ಡ, ಯಾದವಾಡ ಸೇರಿದಂತೆ 23ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಈಗಾಗಲೇ ಬಾಗಲಕೋಟೆಯಲ್ಲಿ 11 ಬ್ಯಾರೇಜ್ ಗಳು ಮುಳುಗಡೆಯಾಗಿವೆ. ಹಲವು ಕುಟುಂಬಗಳನ್ನು ಸ್ಥಳಾಂತರಿಸಲಾಗಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!