Ad imageAd image

ಧರ್ಮದ ಉಳಿವಿಗಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಪ್ರತಿಭಟನೆ

Bharath Vaibhav
ಧರ್ಮದ ಉಳಿವಿಗಾಗಿ ಬಿಜೆಪಿಯಿಂದ ‘ಧರ್ಮಯುದ್ಧ’ ಪ್ರತಿಭಟನೆ
WhatsApp Group Join Now
Telegram Group Join Now

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಧರ್ಮದ ಉಳಿವಿಗಾಗಿ ‘ಧರ್ಮಯುದ್ಧ’ ಹೆಸರಿನಲ್ಲಿ ಪ್ರತಿಭಟನೆ ನಡೆಯಲಿದೆ ನಡೆಯಲಿದೆ ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

ಎಸ್‌ಐಟಿ ತನಿಖೆಯ ನೆಪದಲ್ಲಿ ಧಾರ್ಮಿಕ ಕ್ಷೇತ್ರವಾದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಹಾಗೂ ಇದಕ್ಕೆ ಬೆಂಬಲವಾಗಿ ನಿಂತಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ. ವೈ ವಿಜಯೇಂದ್ರ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಧರ್ಮದ ಉಳಿವಿಗಾಗಿ “ಧರ್ಮಯುದ್ಧ” ಹೆಸರಿನಲ್ಲಿ ಪ್ರತಿಭಟನೆ ನಡೆಯಲಿದೆ.

ಕಾಂಗ್ರೆಸ್‌ ಮತ್ತು ಎಡಪಂಥೀಯರ ಷಡ್ಯಂತ್ರದ ವಿರುದ್ಧ ಸಮಾಜವೂ ಜಾಗೃತಗೊಳ್ಳಬೇಕಾಗಿದೆ. ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅನುಮಾನಿಸುವ, ಅವಮಾನಿಸುವ ಪ್ರವೃತ್ತಿ ಇಂದು ನಿನ್ನೆಯದಲ್ಲ, ನಿರಂತರವಾಗಿ ನಡೆದುಕೊಂಡು ಬರುತ್ತಿದೆ.

ಎಸ್‌ಐಟಿ ರಚಿಸಬೇಕೆಂದು ಹೇಳಿದ್ದೇ ನಗರ ನಕ್ಸಲರು. ನಂತರದಲ್ಲಿ ನಡೆದ ಪುಣ್ಯಕ್ಷೇತ್ರದ ತೇಜೋವಧೆ, ಅಪಪ್ರಚಾರಗಳಿಗೆ ಕಾಂಗ್ರೆಸ್ ಸರ್ಕಾರ ಕಾರಣ. ಇದರ ವಿರುದ್ಧ ಬಿಜೆಪಿ ಎಲ್ಲಾ ಕ್ಷೇತ್ರದಲ್ಲೂ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿದೆ.

 

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!