ಸೇಡಂ: ತಾಲೂಕಿನ ಮಲ್ಕಪಲ್ಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕುರಿತು ಹೊಸ ಬಿಲ್ಡಿಂಗ್ ಉದ್ಘಾಟನೆಗೆ ಅಡ್ಡಿಯಾಗಿರುವ ಘಟನೆ ನಡೆದಿದೆ ಹಳೆಯ ಬಿಲ್ಡಿಂಗ್ ನಲ್ಲೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಮೇಲೆ ಹಳೆಯ ಬಿಲ್ಡಿಂಗ್ ಕುಸಿತಗೊಂಡಿದೆ ಹಲವಾರು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ.
ತಾಲೂಕ ಆಡಳಿತ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಳ್ಳುವರಾ ಎಂಬುದು ಕಾದು ನೋಡಬೇಕಿದೆ.

ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತಂದರು ಅಷ್ಟೊಂದು ಸ್ಪಂದನೆ ಸಿಕ್ಕಿಲ್ಲ ಅದರಿಂದ ಕೊನೆಗೆ ನಮ್ಮೂರಿನ ಮಕ್ಕಳಿಗೆ ಪ್ರಾಣವನ್ನೇ ಕಳೆದು ಕೊಳ್ಳುವಂತೆ ಪರಿಸ್ಥಿತಿ ಎದುರಾಯಿತು. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗದೆ ಅಲ್ಪ ಗಾಯಾಳುಗಳಿಂದ ಮಕ್ಕಳು ಹೊರಬಿದ್ದಿದ್ದಾರೆ ಎಂದು ಗ್ರಾಮಸ್ಥರು ವ್ಯಕ್ತಪಡಿಸಿದರು.
ನೂತನ ಶಾಲೆಗೆ ದಾರಿ ಎಲ್ಲಿದೆ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲಿ ಮೂಡಿ ಬರುತ್ತಿದೆ.
ವಿದ್ಯಾರ್ಥಿಗಳ ಮೇಲೆ ಅಲ್ಪ ಕರುಣೆಯಿಲ್ಲದ ಅಧಿಕಾರಿಗಳು ನಮ್ಮ ಭಾಗಕ್ಕೆ ಬೇಕಾ ಎಂಬುದು ಸ್ಥಳೀಯರ ಆಕ್ರೋಶ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




