ಲಿಂಗಸ್ಗೂರು : ಗೌರಿ ಗಣೇಶ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಪೊಲೀಸರಿಂದ ರೂಟ್ ಮಾರ್ಚ್ ಇಂದು ಹಟ್ಟಿ ಪಟ್ಟಣದ ಪಾಮನ ಕಲ್ಲೂರ್ ಕ್ರಾಸ್ ನಿಂದ ಪ್ರಾರಂಭಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕಾರಿ ಹರೀಶ್ ಜಿ, ಲಿಂಗಸ್ಗೂರು ಉಪ ವಿಭಾಗದ ಡಿ ವೈ ಎಸ್ ಪಿ ದತ್ತಾತ್ರೇಯ ಕಾರ್ನಾಡ್, ಲಿಂಗಸುಗೂರು ಸರ್ಕಲ್ ಇನ್ಸ್ಪೆಕ್ಟರ್ ಪುಂಡಲಿಕ್, ಹಟ್ಟಿ ಸರ್ಕಲ್ ಇನ್ಸ್ಪೆಕ್ಟರ್ ಹೊಸಕೇರಪ್ಪ ಕೆ ,ಹಟ್ಟಿ ಪಿಎಸ್ಐ ಧರ್ಮಣ್ಣ, ಸೇರಿದಂತೆ ಪಿ ಎಸ್ ಐ ಮತ್ತು ಎ ಎಸ್ ಐ ಪೊಲೀಸ್ ಅಧಿಕಾರಿಗಳು ರೂಟ್ ಮಾರ್ಚ್ ನಲ್ಲಿ ಭಾಗವಹಿಸಿದ್ದರು.
ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಟ್ಟಿ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಯಾವುದೇ ಘಟನೆ ನಡೆದ ಹಾಗೆ ಜನರೊಂದಿಗೆ ನಾವಿದ್ದೇವೆ,ಪೊಲೀಸರೆಂದರೆ ಭಯ ಅಲ್ಲ ಭರವಸೆ ಎಂದು ರೂಟ್ ಮಾರ್ಚ್,ಪಾಮನ ಕಲ್ಲೂರ್ ಕ್ರಾಸ್ ನಿಂದ ಪ್ರಾರಂಭಗೊಂಡು ಅಂಬೇಡ್ಕರ್ ಸರ್ಕಲ್, ಜಾಮಿ ಮಜೀದ್, ಹಳೆ ಪಂಚಾಯತ್ ಅಮರಗುಂಡಪ್ಪ ಸರ್ಕಲ್, ಸಂತೆ ಬಜಾರ್,ಹಟ್ಟಿ ಪಟ್ಟಣದ ಬಸ್ ನಿಲ್ದಾಣದ ಮುಖ್ಯರಸ್ತೆಯ ಮೂಲಕ ಕೋಠಾ ಕ್ರಾಸ್, ಸಿದ್ದಾರೂಢ ಮಠ, ಕಾಕಾ ನಗರ ಸೇರಿದಂತೆ ಮುಖ್ಯರಸ್ತೆಯ ಮೂಲಕ ಪೊಲೀಸ್ ಠಾಣೆ ತಲುಪಿದರು, ಪೊಲೀಸ್ ಅಧಿಕಾರಿಗಳಿಂದ ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಶುಭ ಸಂದರ್ಭದಲ್ಲಿ ಸಂತೋಷದಿಂದ ಹಬ್ಬವನ್ನು ಆಚರಿಸಿ ಸದಾ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಸಂದೇಶ ನೀಡಿದರು.




