Ad imageAd image

ಸರ್ಕಾರಿ ನೌಕರರ ಭವನಕ್ಕೆ ಅನುದಾನ ನೀಡುವಂತೆ ಮನವಿ

Bharath Vaibhav
ಸರ್ಕಾರಿ ನೌಕರರ ಭವನಕ್ಕೆ ಅನುದಾನ ನೀಡುವಂತೆ ಮನವಿ
WhatsApp Group Join Now
Telegram Group Join Now

ಸಿರುಗುಪ್ಪ : ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆಯಿಂದ ನೌಕರರ ಭವನದ ಪುನರ್ ನಿರ್ಮಾಣಕ್ಕೆ ಅನುದಾನ ನೀಡುವಂತೆ ಸಂಸದ ರಾಜಶೇಖರ್ ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಕೆ.ಎಮ್.ಚಂದ್ರಕಾಂತ್ ಅವರು ಮಾತನಾಡಿ ನಮ್ಮ ಶಾಖೆಯ ಕಟ್ಟಡವು ಶಿಥಿಲಗೊಂಡು ದುರ್ಬಲವಾಗಿದೆ. ಆದ್ದರಿಂದ ಸರ್ಕಾರಿ ನೌಕರರು ಒಂದು ಕಡೆ ಸೇರಿಕೊಂಡು ಸಮಸ್ಯೆಗಳನ್ನು ಚರ್ಚಿಸಲು ಹಾಗೂ ಸಾರ್ವಜನಿಕರಿಗೆ ಪೂರಕವಾದ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯವಾಗುತ್ತಿಲ್ಲ.

ಕಾರಣ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ತಮ್ಮ ಸಂಸದರ ಅನುದಾನದಲ್ಲಿ ಎರಡು ಕೋಟಿ ಅನುದಾನ ನೀಡಿ ನಮ್ಮ ಸರ್ಕಾರಿ ನೌಕರರ ಸಂಘದ ಬಹು ವರ್ಷಗಳ ಕನಸನ್ನು ನನಸು ಮಾಡಬೇಕು.
ಸೇವಾ ನಿರತರ ನೌಕರರ ಮೇಲಾಗುವ ಅನಗತ್ಯ ಕಿರುಕುಳ, ದೌರ್ಜನ್ಯಗಳು ಕಂಡುಬಂದಲ್ಲಿ ಸಂಬಂದಿಸಿದವರ ಮೇಲೆ ಕ್ರಮವನ್ನು ತೆಗೆದುಕೊಂಡು ಸರ್ಕಾರಿ ನೌಕರರ ಹಿತವನ್ನು ಕಾಪಾಡಿ ಇನ್ನಷ್ಟು ನ್ಯಾಯ ಸಮ್ಮತ ಹಾಗೂ ನಿಷ್ಠೆಯಿಂದ ಕಾರ್ಯ ನಿರ್ವಹಿಸಲು ಅನುವು ಮಾಡಿಕೊಡಬೇಕೆಂದು ಮನವಿ ಸಲ್ಲಿಸಿದರು.

ಇದೇ ವೇಳೆ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಟಿ.ಹುಚ್ಚೀರಪ್ಪ, ರಾಜ್ಯ ಪರಿಷತ್ ಸದಸ್ಯ ಪಿ.ಹನುಮಂತಪ್ಪ, ಇನ್ನಿತರ ಪದಾಧಿಕಾರಿಗಳಾದ ಗುರುರಾಜ, ಶಿವರಾಜ್ ಗೋಡೆಕರ್, ಮಂಜುನಾಥ, ಕೆಂಚಪ್ಪ, ಅಲ್ಲಾಭಕ್ಷಿ, ಇದ್ದರು.

ವರದಿ : ಶ್ರೀನಿವಾಸ ನಾಯ್ಕ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!