–ಶಾಸಕರಾದ ರಮೇಶ ಜಾರಕಿಹೊಳಿ, ದಲಿತ ಸಂಘಟನೆಗಳ ಜಿಲ್ಲಾ ಮುಖಂಡ ಅರ್ಜುನ್ ಗಂಡವಗೋಳ ಸಂತಸ
ಘಟಪ್ರಭಾ: ಘಟಪ್ರಭಾ ಪಟ್ಟಣದಲ್ಲಿ ಒಳ ಮೀಸಲಾತಿ ಜಾರಿ ಹಿನ್ನೆಲೆ ವಿಜಯೋತ್ಸವ ಆಚರಣೆ ಗೋಕಾಕ್ ಮತಕ್ಷೇತ್ರದ ಶಾಸಕರು ರಮೇಶ ಜಾರಕಿಹೊಳಿ ಬಾಗಿ ದಲಿತ ಸಂಘಟನೆಗಳ ಜಿಲ್ಲಾ ಮುಖಂಡ ಅರ್ಜುನ್ ಗಂಡವಗೋಳ ಸಂತಸ ವ್ಯಕ್ತಪಡಿಸಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಘಟಪ್ರಭಾದಲ್ಲಿ ಮಾದಿಗ ಸಮಾಜದಿಂದ ವಿಜಯೋತ್ಸವ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸನ್ಮಾನ
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ನಾಗಮೋಹನ ದಾಸ್ ನೇತೃತ್ವದ ಆಯೋಗ ಸಲ್ಲಿಸಿರುವ ವರದಿ ಜಾರಿಮಾಡಿ ದಲಿತರಿಗೆ ಒಳ ಮೀಸಲಾತಿ ಜಾರಿಗೆ ಬರುವಂತೆ ಮಾಡಿದ್ದಕ್ಕೆ ಸರಕಾರವನ್ನು ಅಭಿನಂದಿಸಿ ಮಾದಿಗ ಸಮುದಾಯದವರು ಗುರುವಾರ ದಿನಾಂಕ 21-08-2025 ರಂದು ಘಟಪ್ರಭಾದ ಶ್ರೀ ಮೃತ್ಯುಂಜಯ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ತಮ್ಮ ಬೇಡಿಕೆಗೆ ಬೆಂಬಲ ಸೂಚಿಸಿದ ಗೋಕಾಕ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅವರನ್ನು ಹೃತ್ಪೂರ್ವಕವಾಗಿ ಸನ್ಮಾನ ಮಾಡಿ ಧನ್ಯವಾದಗಳನ್ನು ತಿಳಿಸಲಾಯಿತು ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಸುಧೀರ್ ಜೋಡಟ್ಟಿ, ಸಮತಾ ಸೈನಿಕ ದಳದ ಕೃಷ್ಣಾ ಗಂಡವ್ವಗೋಳ, ದಲಿತ ಒಕ್ಕೂಟದ ಅರ್ಜುನ ಗಂಡವ್ವಗೋಳ, ವೀರಭದ್ರ ಗಂಡವ್ವಗೋಳ, ರಮೇಶ್ ಗಂಡವ್ವಗೋಳ ಲಕ್ಷ್ಮಣ ಮೇತ್ರಿ ಮುಂತಾದವರು ಭಾಗವಹಿಸಿದ್ದರು.
ವರದಿ: ಶಿವಾಜಿ ಎನ್ ಬಾಲೇಶಗೋಳ




