Ad imageAd image

ಅಧಿಕಾರ ಒಂದು ವರ್ಷ ಪೂರ್ಣ: ಅಭಿಮಾನಿಗಳಿಂದ ಸಂಭ್ರಮಾಚರಣೆ

Bharath Vaibhav
ಅಧಿಕಾರ ಒಂದು ವರ್ಷ ಪೂರ್ಣ: ಅಭಿಮಾನಿಗಳಿಂದ ಸಂಭ್ರಮಾಚರಣೆ
WhatsApp Group Join Now
Telegram Group Join Now

————-ನಗರಸಭಾ ಅಧ್ಯಕ್ಷ ಎಂ ಸಮಿಉಲ್ಲಾ ಮತ್ತು ಉಪಾಧ್ಯಕ್ಷ ಮನೋಹರ್ ಅಧಿಕಾರಕ್ಕೆ ಒಂದು ವರ್ಷ

ಅರಸೀಕೆರೆ : ನಗರಸಭಾ ಕಾರ್ಯಾಲಯದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಅಧಿಕಾರ ಒಂದು ವರ್ಷ ಮುಗಿದಿದ್ದು ನಗರಸಭಾ ಸದಸ್ಯರು ಹಾಗೂ ಅವರ ಅಭಿಮಾನಿಗಳಿಂದ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಚರಣೆ ಹಾಗೂ ಸಾಮಾಜಿಕ ಹೋರಾಟಗಾರ ಮಂಜು ಅವರಿಂದ ಅಧ್ಯಕ್ಷರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ಸದಸ್ಯರಾದ ಹರೀಶ್ ಮಾತನಾಡಿ ಮೊದಲು ನಮಗೆ ವಾರ್ಡ್ಗಳಲ್ಲಿ ಮರ್ಯಾದೆ ಇರಲಿಲ್ಲ ಈ ಅಧ್ಯಕ್ಷರು ಬಂದ ನಂತರ ನಮ್ಮ ವಾರ್ಡ್ಗಳ ಅಭಿವೃದ್ಧಿ ಕೆಲಸಗಳು ಸುಲಭ ರೀತಿಯಲ್ಲಿ ಆಗುತ್ತಿದೆ ಹಾಗೂ ನಮ್ಮ ಅರಸೀಕೆರೆಗೆ ಹೆಮ್ಮೆ ತರುವ ರೀತಿ ಅಂಬೇಡ್ಕರ್ ರವರ ಪುತ್ತಳಿ ಹತ್ತಿರ ರಾಷ್ಟ್ರಧ್ವಜ ನಿರ್ಮಾಣ ಮಾಡಿದ್ದಾರೆ ಹಾಗೂ ಹಲವಾರು ನಗರದ ಅಭಿವೃದ್ಧಿ ಕೆಲಸಗಳು ಮಾಡುತ್ತಿದ್ದಾರೆ ನಗರ ಸಭೆಯ ನಮ್ಮ ಎಲ್ಲಾ ಸದಸ್ಯರಿಂದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುತ್ತೇನೆ.

ಹಾಸನ್ ರಸ್ತೆ ಎಡ ಭಾಗದಲ್ಲಿ ಉತ್ತಮವಾದ ಕೆಲಸವನ್ನು ಅಧ್ಯಕ್ಷರು ಮಾಡುವುದರ ಮೂಲಕ ಸಾಮಾಜಿಕ ರಸ್ತೆ ಡಾಂಬರೀಕರಣ ಹಾಗೂ ಚರಂಡಿ ವ್ಯವಸ್ಥೆಗಳನ್ನು ಸೂಕ್ತವಾದ ರೀತಿಯಲ್ಲಿ ಮಾಡಿಕೊಡುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಮಂಜು ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸುಲ್ತಾನ್ ಉಲ್ ಹಿಂದ್ ಟ್ರಸ್ಟ್ ವತಿಯಿಂದ ಅಧ್ಯಕ್ಷರಿಗೆ ಸನ್ಮಾನಿಸಲಾಯಿತು

ವರದಿ: ರಾಜು ಅರಸೀಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!