ಇಲಕಲ್ಲ: ತಾಲೂಕಿನ ಕಂದಗಲ್ಲ ಗ್ರಾಮದ ಸುವರ್ಣಗಿರಿ ಶ್ರೀ ರುದ್ರುಸ್ವಾಮಿ ಮಠದಲ್ಲಿ ಶ್ರಾವಣ ಮಾಸದ ಅಂಗವಾಗಿ ಶ್ರೀ ಮ ನಿ ಪ್ರ ಡಾ ಚನ್ನಮಲ್ಲ ಮಹಾಸ್ವಾಮಿಗಳ ಆಶೀರ್ವಾದ ದೊಂದಿಗೆ ನೆಡೆದು ಬಂದ ಗದುಗಿನ ಪಂಡಿತ್ ಪುಟ್ಟರಾಜ್ ಶಾಸ್ತ್ರೀಗಳು ಚುರ್ಚಿಹಾಳ್ ಇವರ ಪಠಣದೊಂದಿಗೆ ಮಹಾತ್ಮರ ಜೀವನ ದರ್ಶನ ನಾಳೆ 24 /8/2025/ ರವಿವಾರದಂದು ಮಂಗಳಗೊಳ್ಳುವದು.
ಈ ಕಾರ್ಯಕ್ರಮ ದಲ್ಲಿ ನಂದವಾಡಗಿಯ ಷ ಬ್ರ ಡಾ ಅಭಿನವ್ ಚನ್ನಬಸವ ಶಿವಾಚಾರ್ಯರು ಅಮೀನಗಡದ ಮ ನಿ ಪ್ರ ಶಂಕರ ರಾಜೇಂದ್ರ ಮಹಾಸ್ವಾಮಿಗಳು, ಗುಲಬರ್ಗಾ ಜಿಲ್ಲಾ ಯಲಗೋಡದ್ ಮ ನಿ ಪ್ರ ಗುರಲಿಂಗ ಮಹಾಸ್ವಾಮಿಗಳು, ಕೊಪ್ಪಳ ಜಿಲ್ಲಾ ನಾಗರಗಡ್ಡಿ ಮಠದ ಮ ನಿ ಪ್ರ ಶಾಂತಲಿಂಗ ಮಹಾಸ್ವಾಮಿಗಳು,ಹುನಗುಂದ ಅಮರೇಶ್ವರ್ ದೇವರು,ಭಾಗವಹಿಸಿ ಆಶೀರ್ವಚನ ನೀಡಲಿದ್ದು, ಸಂಗಮೇಶ ನೀಲಾಮಠ ಹಾಗೂ ಪ್ರತಾಪಕುಮಾರ್ ಹಿರೇಮಠ, ಕುಷ್ಟಗಿ ಇವರ ಸಂಗೀತದೊಂದಿಗೆ ಈ ಭಕ್ತಿ ಪ್ರದಾನ ಕಾರ್ಯಕ್ರಮ ದಲ್ಲಿ ಅಯ್ಯಚಾರ, ಲಿಂಗಧೀಕ್ಷೆ ರುದ್ರಾಕ್ಷಿ ಧಾರಣೆ ಮುತ್ತೈದೆಯರಿಗೆ ಉಡಿ ತುಂಬುವದು, ಕುಂಭ ಮೆರವಣಿಗೆ,ತಿಂಗಳ ಪರ್ಯಂತ ಸಾಗಿಬಂದ ಅನ್ನಸಂತರ್ಪಣೆ ಮಹಾಪ್ರಸಾದದೊಂದಿಗೆ ಸಂಪನಗೊಳ್ಳುವದು, ಸಕಲ ವಾದ್ಯ ವೈಭವಗಳೊಂದಿಗೆ ಲಿo, ಶ್ರೀ ರುದ್ರಶಿವಯೋಗಿಗಳ ಭವ್ಯ ಮೂರ್ತಿ ಗ್ರಾಮದ ತುಂಬೆಲ್ಲಾ, ಸಂಚರಿಸಲಿದ್ದು, ಕಂದಗಲ್ಲ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ತನು, ಮನ,ಧನ ಅರ್ಪಿಸುವ ಮೂಲಕ ಈ ಎಲ್ಲ ಕಾರ್ಯಕ್ರಮ ಗಳಲ್ಲಿ ಭಕ್ತಿಯಿಂದ ಪಾಲ್ಗೊಂಡು ಯಶಸ್ವೀಗೊಳಿಸಬೇಕು ಎಂದು ಮುಖಂಡರಾದ ಮಹಾಂತೇಶ್ ಕಡಿವಾಲ್, ಪಂಪಣ್ಣ ಸಜ್ಜನ, ಬಸೆಟ್ಟೆಪ್ಪ ಸಜ್ಜನ, ಚನ್ನಪ್ಪ ಜಾಲಿಹಾಳ್, ಅಮರಪ್ಪ ಹಡಪದ್, ಮಹಾಂತೇಶ್ ಗುರುವಿನಮಠ್, ಮಹಾಂತೇಶ್ ಗೋದಿ, ಪಂಪಯ್ಯ್ ಗುರುವಿನಮಠ್, ದೊಡ್ಡಬಸು ಮಲ್ಲಾಪುರ ವಿನಂತಿಸಿದ್ದಾರೆ.




