ಶ್ರಾವಣ ಮಾಸ ಪ್ರಯುಕ್ತ ಸದಲಗಾ ಮಹಾದೇವ ಮಂದಿರದಲ್ಲಿ ಪ್ರವಚನ
6 ಸಾವಿರ ಭಕ್ತರಿಂದ ಮಹಾಪ್ರಸಾದ ಸ್ವೀಕಾರ
ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದ ಮಹಾದೇವ ದೇವಸ್ಥಾನ ಕಮಿಟಿ ವತಿಯಿಂದ ಮಹಾದೇವ ಮಂದಿರದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಒಂದು ತಿಂಗಳವರೆಗೆ ಚೆನ್ನಮ್ಮನ ಕಿತ್ತೂರು ಬಳಿ ಕುಳವಳ್ಳಿ ಯೋಗಾಶ್ರಮದ ಓಂ ಗುರೂಜಿ ಅವರಿಂದ ಪ್ರವಚನ ಹಾಗೂ ಮಂದಿರದಲ್ಲಿ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಇಂದು ಅಮಾವಾಸ್ಯೆಯ ದಿನವಾದ ಶನಿವಾರ ಬೆಳಿಗ್ಗೆ ಮಂದಿರದಲ್ಲಿ ಮಹಾದೇವನಿಗೆ ವಿಶೇಷ ಪೂಜಾ ಅಲಂಕಾರ, ಮಾಡಿದ್ದರಿಂದ ಸದಲಗಾ, ಬೈನಾಕವಾಡಿ, ಶಮನೆವಾಡಿ ಸೇರಿದಂತೆ ಸುತ್ತಲಿನ ಹಳ್ಳಿಗಳ ಸಾವಿರಾರು ಭಕ್ತರು ಸರದಿಯಲ್ಲಿ ನಿಂತು ದರ್ಶನ್ ಪಡೆದರು.
ಮಧ್ಯಾಹ್ನ 12 ಗಂಟೆಯಿಂದ ಮಹಾಪ್ರಸಾದ ಪ್ರಾರಂಭವಾಯಿತು ಈ ಸಂದರ್ಭದಲ್ಲಿ ಆರು ಸಾವಿರಕ್ಕೂ ಅಧಿಕ ಭಕ್ತರು ಮಹಾಪ್ರಸಾದ ಸ್ವೀಕರಿಸಿದರು. ಪಟ್ಟಣದ ಮಹದೇವ ದೇವಸ್ಥಾನ ಸಮಿತಿ ಹಾಗೂ ಲಿಂಗಾಯತ ಸಮಾಜದ ಕಾರ್ಯಕರ್ತರು, ಬೆಳಗ್ಗೆಯಿಂದಲೇ ಅತ್ಯಂತ ಅಚ್ಚುಕಟ್ಟಾಗಿ ಮಹಿಳೆಯರಿಗೆ ಹಾಗೂ ಫುರುಷರಿಗೆ ಪ್ರತ್ಯೇಕ ಮಹಾಪ್ರಸಾದ ಹಂಚುವ ವ್ಯವಸ್ಥೆ ಮಾಡಿದ್ದರಿಂದ ಶಿಸ್ತು ಬದ್ಧವಾಗಿ ಮಹಾಪ್ರಸಾದ ಸ್ವೀಕರಿಸಿದರು ಸಂಪೂರ್ಣ ಶ್ರಾವಣ ಮಾಸದಲ್ಲಿ ನಡೆದ ಎಲ್ಲ ಕಾರ್ಯಕ್ರಮಗಳು ಯಶಸ್ವಿಗೊಳಿಸಲು ಮಹದೇವ ದೇವಸ್ಥಾನ ಸಮಿತಿ, ಲಿಂಗಾಯಿತ ಸಮಾಜ ಹಾಗೂ ಪಟ್ಟಣದ ಕಾರ್ಯಕರ್ತರು ಶ್ರಮಿಸಿದ್ದರಿಂದ ಧಾರ್ಮಿಕ ಐಕ್ಯತೆ ಎದ್ದು ತೋರುವoತಿತ್ತು.
ಮಹಾವೀರ ಚಿಂಚಣೆ




