
ಯಲಹಂಕ: ಕ್ಷೇತ್ರದ ದಾಸನಪುರ ಗ್ರಾಮ ಪಂಚಾಯಿತಿಯ ಕಳೆದ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಹಣಕಾಸು ಯೋಜನೆ ಶಾಸನ ಬದ್ಧ ಅನುದಾನ ಗ್ರಾಮ ಪಂಚಾಯಿತಿ ಸಾಮಾನ್ಯ ನಿಧಿ ಇಂದಿರಾ ಆವಾಜ್ ಯೋಜನೆ ಆಶ್ರಯ ವಸತಿ ಯೋಜನೆ ಅಂಬೇಡ್ಕರ್ ವಸತಿ ಯೋಜನೆ ಶೇಕಡ 25 ರಷ್ಟು ರಂತೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕಲ್ಯಾಣಾಭಿವೃದ್ದಿ ಯೋಜನೆ ಹಾಗೂ ಗ್ರಾಮ ಪಂಚಾಯತಿಯ ಅನುದಾನಗಳಿಂದ ಶುದ್ದ ಕುಡಿಯುವ ನೀರು, ಬೀದಿ ದೀಪ,ನೈರ್ಮಲ್ಯ ರಸ್ತೆ ಚರಂಡಿ ಅಂಗನವಾಡಿ ರಾಜ ಕಾಲುವೆ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು, ಸದಸ್ಯರು ಮತ್ತು ಜನಪ್ರತಿನಿಧಿಗಳು ಪಂಚಾಯತಿ ಸಿಬ್ಬಂದಿ ವೃಂದದವರು ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ: ಬಾಲಾಜಿ




