ತುರುವೇಕೆರೆ : ತಾಲ್ಲೂಕಿನ ಮಾಯಸಂದ್ರದ ಎಸ್.ಬಿ.ಜಿ. ಕಾಲೇಜಿನ ಬಾಲಕರ ತಂಡ ಥ್ರೋಬಾಲ್ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ತುರುವೇಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ ದಸರಾ ಹಬ್ಬದ ಪ್ರಯುಕ್ತ ತುಮಕೂರು ಜಿಲ್ಲಾ ಯುವಜನ ಕ್ರೀಡೆ ಮತ್ತು ಸಬಲೀಕರಣ ಇಲಾಖೆ ವತಿಯಿಂದ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಪಾಲ್ಲೊಂಡಿದ್ದ ಎಸ್.ಬಿ.ಜಿ. ಕಾಲೇಜಿನ ಬಾಲಕರ ತಂಡ ಹಿರಿಯರ ಥ್ರೋಬಾಲ್ ಸ್ಪರ್ಧೆಯಲ್ಲಿ ತಾಲೂಕು ಹಂತದಲ್ಲಿ ಜಯಗಳಿಸಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಎಸ್.ಬಿ.ಜಿ. ಕಾಲೇಜಿನ ಬಾಲಕರ ತಂಡದ ರಾಷ್ಟ್ರೀಯ ಥ್ರೋಬಾಲ್ ಆಟಗಾರ ಮನೀತ್ ಎಂ, ಉಲ್ಲಾಸ್, ಮಹದೇವಸ್ವಾಮಿ, ಯಶವಂತ್,ವಿನಯ್, ಯಶಸ್ ಅವರನ್ನು ಯುವಜನ ಕ್ರೀಡೆ ಮತ್ತು ಸಬಲೀಕರಣ ಇಲಾಖೆಯ ಮಂಜುನಾಥ್, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಸಿದ್ದಪ್ಪ ವಾಲಿಕರ್, ಮಾಯಸಂದ್ರ ಹೋಬಳಿ ಕಸಾಪ ಅಧ್ಯಕ್ಷ ಮುನಿರಾಜು, ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಶಶಿಕುಮಾರ್, ಚಿರಂಜೀವಿ, ಹೆಗ್ಗಪ್ಪ ತಳವಾರ್, ಗಿರೀಶ್ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್




