ಯಮಕನಮರಡಿ : ನಿನ್ನೆ ದಿನಾಂಕ 24 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ರಾಹುಲ್ ಅಣ್ಣಾ ಜಾರಕಿಹೊಳಿಯವರ ನೇತೃತ್ವದಲ್ಲಿ ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹತ್ತರಗಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಇಸ್ಲಾಂಪೂರ ಮತ್ತು ಶಾಹಬಂದರ ಶ್ರೀ ಮಹರ್ಷಿ ವಾಲ್ಮೀಕಿ ಸರ್ಕಲ್ ದಲ್ಲಿ ನಡೆದ ಮುಂಬರುವ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆಯನ್ನು ನಡೆಸಿದರು.

ಈ ಸಭೆಯಲ್ಲಿ ಸಚಿವರು ಆಪ್ತ ಸಹಾಯಕರಾದ ಶ್ರೀ ಮಾರುತಿ ಗುಟಗುದ್ದಿ ಲಗಮಣ್ಣ ಪನಗುದ್ದಿ ಜಂಗ್ಲಿ ಸಾಬ್ ನಾಯಕ್ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ಮಂಜುಗೌಡ ಪಾಟೀಲ್ ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮಾಹತೇಶ ಮಗದುಮ್ಮ ಗ್ರಾಮಿಣ ಜೀಲ್ಲಾ ಅಧ್ಯಕ್ಷರಾದ ಶ್ರೀ ಬಾಳೇಶ ದಾಸನಟ್ಟಿ ಕೆ ಇ ಬಿ ಡೈರೆಕ್ಟರಾದ ಈರಪ್ಪ ಭಂಜೀರಾಮ್ ಯಮಕನಮರಡಿ ಎಸ್ ಟಿ ಘಟಕದ ಅಧ್ಯಕ್ಷರಾದ ಶ್ರೀ ಮಾರುತಿ ಕುದರಿ ಮುಖಂಡರಾದ ಶ್ರೀ ಗಂಗಾರಾಮ್ ಇರಬಾವಿ ರಾಮಚಂದ್ರ ನಾಯಕ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




