ಸಿರುಗುಪ್ಪ: ತಾಲೂಕು ಕ್ರೀಡಾಂಗಣ ದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಪ್ರಸ್ತಕ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಅಸ್ತವ್ಯಸ್ತವಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಗ್ರೇಸಿ ಇದರ ಬಗ್ಗೆ ಮಾಹಿತಿ ಕೇಳಿದಾಗ ಯಾವುದೇ ಮಾಹಿತಿ ಹೇಳದೆ ಜಾರಿಕೊಳ್ಳುತ್ತಿದ್ದಾರೆ. 25 ರಂದು ಬೆಳಗ್ಗೆ 10.30 ಗಂಟೆಗೆ ತಾಲೂಕಿನ ಮೈದಾನದಲ್ಲಿ ಕ್ರೀಡಾಕೂಟವು ಚಾಲನೆ ವಾಗದೆ ಕ್ರೀಡಾಪಟ್ಟಿಗಳಿಗೆ ನಿರಾಸೆ ಉಂಟಾಯಿತು.

ಸಂಬಂಧಪಟ್ಟಂತಹ ಅಧಿಕಾರಿ ಮಧ್ಯಾಹ್ನ ಎರಡು ಗಂಟೆ ಕಾದು ಸುಸ್ತಾಗಿದರು .ನಂತರ ಮಾತನಾಡಿದ ನೊಂದ ಕ್ರೀಡಾಪಟು ನಜೀರ್ ಅಹಮದ್ ಪ್ರತಿವರ್ಷ ದಸರಾ ಕ್ರೀಡಾಕೂಟದಲ್ಲಿ ತಾಲೂಕು ಮಟ್ಟದಲ್ಲಿ ವಿಜಯಶಾಲಿ ರಾಗಿ ಜಿಲ್ಲಾಮಟ್ಟ ಮತ್ತು ವಿಭಾಗ ಮಟ್ಟ ಭಾಗವಹಿಸಿ ಕ್ರೀಡಾಪಟುಗಳಿಗೆ ಯಾವುದೇ ರೀತಿಯಾಗಿ ಸೌಲಭ್ಯ ಕೊಡದೆ ಪ್ರಯಾಣ ಬತ್ತೆ ನೀಡದೆ ವಿನಾಕಾರಣ. ಉಡಾಫೆ ಉತ್ತರ ನೀಡುತ್ತಾರೆ. ಕಬಡ್ಡಿ. ವಾಲಿಬಾಲ್. ತ್ರೋಬಾಲ್. ಗುಂಪು ಆಟಗಳ ಜೊತೆಗೆ. ಚಕ್ರ. ಗುಂಡು. ಬರ್ಚಿ. ಜಾವೆಲಿ ಎಸೆತಗಳು ಓಟಸ್ಪರ್ಧೆ ಇನ್ನಿತರ ಕ್ರೀಡೆಗಳು ನಡೆಯುತ್ತವೆ. ಇದೇ ವೇಳೆ. ಬಸವ. ಚಾಂದ್. ಮನೋಜ್ ಗೌಸ್.ಮಹಿಳಾ ಕ್ರೀಡಾಪಟುಗಳು. ಭಾಗವಹಿಸಿದ್ದರು.
ವರದಿ: ಶ್ರೀನಿವಾಸ ನಾಯಕ್




