ಯಾದಗಿರಿ : ದಿನಾಂಕ 24 ರಂದು ಕರ್ನಾಟಕ ಕ್ಸರ್ಕಾರ ಲೋಕೋಪಯೋಗಿ ಕ್ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಜರುಗಿದ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸಮಾಜದ ಶೋಷಿತ, ಪೀಡಿತ, ಹಿಂದುಳಿದ ಸಮುದಾಯಗಳ ಏಕತೆಯ ಅಗತ್ಯತೆಯನ್ನು ಒತ್ತಿ ಹೇಳಿ, ಸಮಾನತೆ, ಶಿಕ್ಷಣ, ಉದ್ಯೋಗ ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಸಮಾಜದ ಪ್ರತಿ ವರ್ಗವೂ ಅಭಿವೃದ್ಧಿಯ ಹಾದಿಯಲ್ಲಿ ಸಾಗಬೇಕಾದರೆ ಐಕ್ಯತೆ ಮತ್ತು ಸಹಕಾರ ಮುಖ್ಯವೆಂದು ಅಭಿಪ್ರಾಯ ಪಟ್ಟಡುವ ಮೂಲಕ
ಸಮಾವೇಶದಲ್ಲಿ ಭಾಗವಹಿಸಿದ್ದ ಅನೇಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಹಕ್ಕು ರಕ್ಷಣೆಗೆ ಸರ್ಕಾರದಿಂದ ಕೈಗೊಳ್ಳಲಾಗುತ್ತಿರುವ ಕಲ್ಯಾಣ ಯೋಜನೆಗಳ ಕುರಿತು ವಿವರಿಸಿ, ಭವಿಷ್ಯದಲ್ಲೂ ಹೆಚ್ಚಿನ ನ್ಯಾಯ ಹಾಗೂ ಸಬಲೀಕರಣಕ್ಕಾಗಿ ತಮಗೆ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಭರವಸೆ ನೀಡಿದರು.

ಇಂದು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನಲ್ಲಿ ಜರುಗಿದ ಶೋಷಿತ ಸಮುದಾಯಗಳ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದೆನು.
ಈ ಸಂದರ್ಭದಲ್ಲಿ ಸಚಿವ ಡಾ.ಹೆಚ್.ಸಿ ಮಹದೇವಪ್ಪಾ ಅವರು ಶರಣಬಸಪ್ಪ ದರ್ಶನಾಪುರ,DSS ಮುಖಂಡರಾದ ಶ್ರೀ ಡಿ ಜಿ ಸಾಗರ್, ಉರಿಲಿಂಗಿ ಪೆದ್ದಿಮಠದ ಶ್ರೀಗಳಾದ ಜ್ಞಾನ ಪ್ರಕಾಶ ಸ್ವಾಮಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ




