ಚಿಟಗುಪ್ಪ: ಬೀದರ ರಂಗ ಮಂದಿರದಲ್ಲಿ ಸೆಪ್ಟೆಂಬರ್ 2ರಂದು ನಡೆಯುವ ಜಿಲ್ಲಾ ಯುವ ಮಹೋತ್ಸವದಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕು ಎಂದು ಅಖಿಲ ಭಾರತ ಕ್ರೈಸ್ತ ಮಹಾ ಸಭಾ ತಾಲ್ಲೂಕು ಅಧ್ಯಕ್ಷ ರೋಹನ ತಿಳಿಸಿದರು.
ತಾಲ್ಲೂಕಿನ ತಾಳಮಡಗಿ ಗ್ರಾಮದಲ್ಲಿ ಶನಿವಾರ ಯುವ ಮಹೋತ್ಸವದ ಕರ ಪತ್ರಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಯುವ ಮಹೋತ್ಸವದಲ್ಲಿ ಜಿಲ್ಲೆ ಸೇರಿದಂತೆ ರಾಜ್ಯ ಮಹಾನ್ ಗಣ್ಯರು ಅಂದು ಭಾಗವಹಿಸುತ್ತಿದ್ದಾರೆ.ಅದರಿಂದ ತಾಳಮಡಗಿ ಗ್ರಾಮ ಸೇರಿ ಪ್ರತಿ ಹಳ್ಳಿಯಿಂದ ಹೆಚ್ಚೇಚ್ಚು ಜನರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸನ್ನಿ ಹುಲ್ಲಾ,ಕಿರಣ ಜಲಸಂಗಿ,ಸಂತೋಷ ಗಡ್ಡದೋರ,ಸ್ವಾಮಿದಾಸ ವಗ್ಗಿ,ಪ್ರಭು ಲಂಬುನೋರ,ನಿಖಿಲ ಜಲಸಂಗಿ,ಪ್ರದೀಪ ಗಡ್ಡದೋರ,ಸುಮನ್ ವಗ್ಗಿ,ಸತೀಶ ತೆಲಗುರ,ಪ್ರಭಾಕರ ವಗ್ಗಿ,ಮಿಥುನ ತೆಲಗುರ,ರಮೇಶ,ಜಾನ್ಸನ್ ಲಂಬುನೋರ,ಪ್ರಕಾಶ ಗಡ್ಡದೋರ,ಧನರಾಜ ಮಂಗಲಗಿ ಸೇರಿ ಅನೇಕರು ಇದ್ದರು.
ವರದಿ:ಸಜೀಶ ಲಂಬುನೋರ




