ಗೋಕಾಕ : ನನ್ನಿಂದ ಯಾರ ಮೇಲೂ ರೌಡಿ ಶಿಟ್ ತೆಗೆಯಬೆಕೆಂಬ ಭಾವನೆ ಇಲ್ಲ,ನನ್ನಿಂದ ಯಾರಿಗೂ ಅನ್ಯಾಯ ಆಗಬಾರದು ಗೋಕಾಕದಲ್ಲಿ ನಡೆದ ಶಾಂತಿಸಭೆಯಲ್ಲಿ ಪಿಎಸ್ಐ ಕಿರಣ ಮೊಹಿತೆ ಖಡಕ್ ಎಚ್ಚರಿಕೆ ನೀಡಿದರು.
ಗೋಕಾಕ ನಗರ ಪೋಲಿಸ್ ಠಾಣೆ ಹಮ್ಮಿಕೊಂಡಿದ್ದ ಗಣೇಶೋತ್ಸವ ಹಾಗೂ ಈದ್ ಮಿಲಾದ ಶಾಂತಿ ಸಭೆಯಲ್ಲಿ ಹಿಂದು ಮತ್ತು ಮುಸ್ಲಿಂ ಸಮಾಜದ ಮುಖಂಡರ ಜೊತೆ ನಡೆದ ಶಾಂತಿ ಸಭೆಯಲ್ಲಿ ನಗರ ಪಿಎಸ್ ಐ ಕಿರಣ ಮೊಹಿತೆ ಇವರು ಮಾತನಾಡಿ.
ಪೋಲಿಸರಿಗೆ ಯಾರ ಮೇಲೂ ದ್ವೇಷ ಇರುವುದಿಲ್ಲ,ನಮ್ಮ ಮನೆ ಗಣೇಶನ ಬಿಟ್ಟು ನಿಮ್ಮ ಬಂದೋ ಬಸ್ತ ಮಾಡುತ್ತೇವೆ. ನಿಮ್ಮ ಗಣಪತಿಯೆ ನಮ್ಮ ಗಣಪತಿ ಎಂದು ತಿಳಿದಿರುತ್ತೇವೆ.
ಗೋಕಾಕದಲ್ಲಿ ಇನ್ನುವರೆಗೂ ಯಾವುದೆ ಅಹಿತಕರ ಘಟನೆ ನಡೆದಿಲ್ಲ ಲಕ್ಷ್ಮೀದೇವಿಯಂತಹ ದೊಡ್ಡ ಜಾತ್ರೆಯನ್ನೆ ಯಾವುದೆ ಅಹಿತಕರ ಘಟನೆ ನಡೆಯದಂತೆ ಅದ್ದೂರಿಯಾಗಿ ಭಕ್ತಿಯಿಂದ ಮಾಡಿದ ಹಾಗೆ ಗಣೇಶ ಮತ್ತು ಈದ್ ಮಿಲಾದ ಆಚರಿಸಬೇಕು.
ಮಾರ್ಗದ ಬದಲಾಯಿಸದೆ ಯಾವುದೆ ಕಾರಣಕ್ಕೂ ಮೆರವಣಿಗೆಯಲ್ಲಿ ಡಿಜೆ ಹಚ್ವುವಂತಿಲ್ಲ,ಅದರ ಬದಲಾಗಿ
ಡೊಳ್ಳು, ಜಾಜ ಪತಂಗಗಳಂತಹ ಸಾಂಸ್ಕ್ರತೀಕ ಸೊಡಗು ಹೆಚ್ಚಿಸಿಲು ಪಿಎಸ್ ಐ ವಿನಂತಿಸಿದರು.
ಇನ್ನು ಬೆಳಗಾವಿಯಲ್ಲಿ ಡಿಜೆಗೆ ಅನುಮತಿ ನೀಡಿದ್ದಾರೆ,ನಮಗೂ ನೀಡಿ ಅಂತ ಗಣೇಶ ಮಂಡಳಿಯವರ ಬೇಡಿಕೆ ಇಟ್ಟಾಗ ಯಾವುದೆ ಕಾರಣಕ್ಕೂ ಡಿಜೆಗೆ ಅನುಮತಿ ಇಲ್ಲ ಎಂದು ಪಿಎಸ್ ಐ, ಕಿರಣ ಮೊಹಿತೆ ಎಚ್ಚರಿಸಿದರು.
ಪ್ರತಿ ಮಂಟಪದಲ್ಲಿ ಆಯೋಜಕರು ಇಬ್ಬರು ಮಂಡಳಿ ಸದಸ್ಯರನ್ನ ನೇಮಿಸಬೇಕು,ಗಣೇಶ ಮಂಟಪದಲ್ಲಿ ಜೂಜಾಟ ಇಸ್ಪೇಟ ಅಡುವಂತಿಲ್ಲ,ಯಾಕೆಂದರೆ ಎನೆ ಪೂಜೆ ಮಾಡುವದಕ್ಕಿಂತ ಮೊದಲು ವಿಘ್ಮೇಶನನ್ನು ಪೂಜಿಸುತ್ತೇವೆ.
ಕಾನೂನು ಮೀರಿದರೆ ಅಂತವರ ವಿರುದ್ದ ರೌಡಿ ಶಿಟರ ತೆಗೆಯಲಾಗುತ್ತದೆ.ಅದಕ್ಕಾಗಿ ಅಂತವುದಕ್ಕೆ ಯಾರು ಅವಕಾಶ ಮಾಡಿಕೊಡದೆ ಗಣೇಶ ಹಬ್ಬ , ಈದ ಮಿಲಾದನ್ನು ಭಕ್ತಯಿಂದ ಆಚರಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಅಯ್, ಸುರೇಶಬಾಬು ಆರ್, ಹೆಚ್ಚುವರಿ ಪಿಎಸ್ಐ, ನಿಖೀಲ ಕಾಂಬಳೆ, ಸಿಬ್ಬಂದಿಗಳಾದ ಮಂಜುನಾಥ ಹುಚ್ಚಗೌಡರ, ಸೇರಿದಂತೆ ಗೋಕಾಕ ನಗರದ ಗಣೇಶ ಮಂಡಳಿಯ ಸದಸ್ಯರು, ಮುಸ್ಲಿಂ ಸಮಾಜದ ಹಿರಿಯರು ಹಾಗೂ ಇನ್ನೂಳಿದವರು ಉಪಸ್ಥಿತರಿದ್ದರು.
ವರದಿ : ಮನೋಹರ ಮೇಗೇರಿ




