ಕಂಪ್ಲಿ : ವಿಘ್ನ ಹರತ , ಬುದ್ಧಿ ಪ್ರಧಾನಕ , ಪ್ರಥಮ ಪೂಜ್ಯ , ಗಣಗಳ ಅಧಿಪತಿ ಗಣಪತಿ. ಎಲ್ಲಕ್ಕಿಂತ ಮೊದಲು ಗಣಪತಿಯನ್ನು ಪೂಜಿಸಲಾಗುತ್ತದೆ, ಬಪ್ಪನ ನಂತರ ಇತರ ದೇವತೆಗಳನ್ನು ಆರಾಧಿಸಲಾಗುತ್ತದೆ. ಯಾವುದೇ ಆಚರಣೆಯಲ್ಲಿ, ಗಣೇಶನನ್ನು ಮೊದಲು ಪೂಜಿಸಲಾಗುತ್ತದೆ . ಏಕೆಂದರೆ ಗಣೇಶ ಅಡೆತಡೆಗಳ ನಾಶಕ ಮತ್ತು ಬರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ.
ಯುವಕರಿಗೆ ಅತ್ಯಂತ ಅಚ್ಚುಮೆಚ್ಚಿನ ಹಬ್ಬವಾದ ಗಣೇಶ ಚತುರ್ಥಿಗೆ ಸಮಯ ಹತ್ತಿರವಾಗಿದ್ದು, ವಿನಾಯಕನ ಮೂರ್ತಿಯ ಪ್ರತಿಷ್ಟಾಪನೆಗೆ ಎಲ್ಲಾ ಸಿದ್ದತೆಗಳು ನಡೆಯುತ್ತಿದೆ. ನ್ನೂ ಕಂಪ್ಲಿ ಪಟ್ಟಣದಲ್ಲಿ ಹಲವು ಕಡೆ ಗಣೇಶ ವಿಗ್ರಹಳ ಮಾರಾಟ ಸಹ ಶುರುವಾಗಿದೆ.
ಗಣಗಳ ಅಧಿಪತಿಯಾದ ಗಣಪತಿಯನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. ಗಣಪತಿ, ವಿನಾಯಕ, ಗಜಾನನ, ಏಕದಂತ ಹೀಗೆ ನಾನಾ ಹೆಸರಿಂದ ಕರೆಯಲಾಗುತ್ತದೆ.
ಅಂದ್ಹಾಗೆ ಕಂಪ್ಲಿಯಲ್ಲೂ ಕೂಡ ದೇಶದ ನಾನಾ ಭಾಗಗಳಂತೆ ಬಹಳ ವಿಜೃಂಭಣೆಯಿಂದ ಹಬ್ಬ ಆಚರಣೆ ಮಾಡಲು ಎಲ್ಲಾ ತಯಾರಿಗಳಾಗುತ್ತಿವೆ.
ವಿಶೇಷ ಅಂದ್ರೆ ಕಂಪ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡಲಾಗುತ್ತಿದೆ.
ಈ ಮೂಲಕ ಪರಿಸರ ಸ್ನೇಹಿ ಗಣೇಶ ಪ್ರತಿಷ್ಟಾಪನೆ ಸಡಗರದ ಆಚರಣೆಯ ಜೊತೆಗೆ , ಪರಿಸರ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ ಎಂಬ ಸಂದೇಶವನ್ನೂ ರವಾನೆ ಮಾಡಲಾಗುತ್ತಿದೆ.
ಈ ವಿಗ್ರಹಗಳು ಸಂಪೂರ್ಣವಾಗಿ ಮಣ್ಣು ಹಾಗೂ ಪೇಪರ್ ನಿಂದ ತಯಾರಿಸಲಾಗಿದೆ. ಇದರಿಂದ ಪರಿಸರಕ್ಕೆ ಸಹ ತೊಂದರೆಯಾಗುವುದಿಲ್ಲ.
ಈ ಬಗ್ಗೆ ಗಣೇಶ ವಿಗ್ರಹ ಮೂರ್ತಿಗಳ ಮಾರಾಟಗಾರರಾದ ಶೀಲಾ ಬಾಯಿ ಮಾತನಾಡಿ, ನಾವು ಸುಮಾರು 100 ವರ್ಷಗಳಿಂದ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದೇವೆ. ನಾವು ಪ್ರತೀ ವರ್ಷ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾತ್ರ ಮಾರಾಟ ಮಾಡುತ್ತೇವೆ. ನಮಗೆ ವ್ಯಾಪರಕ್ಕಿಂತ ಪರಿಸರ ಮುಖ್ಯ ಎಂದರು.
ಕಂಪ್ಲಿ ನಗರದಲ್ಲಿ ಗಣೇಶ ಮೂರ್ತಿಗೆ ಅಂತಿಮ ರೂಪ ಗಣೇಶ ಮೂರ್ತಿಗಳನ್ನು ಹಲವರು ತಯಾರು ಮಾಡುತ್ತಾರೆ.
ಆದರೆ, ಕುಂಬಾರರು ಕೂಡ ಇದೀಗ ಗಣೇಶ ಮೂರ್ತಿಗಳನ್ನು ತಯಾರು ಮಾಡುತ್ತಿದ್ದಾರೆ. ಮಡಿಕೆ ಮಾರಾಟ ಕಡಿಮೆಯಾಗುತ್ತಿರುವುದರಿಂದ ಈಗ ಪರ್ಯಾಯ ಮಾರ್ಗವನ್ನು ಕುಂಬಾರರು ಕಂಡುಕೊಂಡಿದ್ದಾರೆ. ಕುಂಬಾರರು ಕ್ರಿಯಾತ್ಮಕವಾಗಿ ಸುಂದರವಾದ ಗಣೇಶ ಮೂರ್ತಿ ಗಳನ್ನು ತಯಾರು ಮಾಡುತ್ತಿರುವುದು ಕಂಡುಬಂದಿದೆ.



