ಬಳ್ಳಾರಿ: ಕಂಪ್ಲಿ ನಗರದಲ್ಲಿ ಗೌರಿ ಗಣೇಶ ಹಬ್ಬಕ್ಕೆ ಗಣಿನಾಡು ಬಳ್ಳಾರಿಯಲ್ಲಿ ಸಂಪೂರ್ಣ ಸಿದ್ಧತೆ ನಡೆಸಿದ್ದು, ಮಂಗಳವಾರ ಬೆಲೆ ಏರಿಕೆಯ ನಡುವೆಯೂ ಜನರು ಮಾರುಕಟ್ಟೆಗೆ ಬಂದು ಖರೀದಿಗೆ ಮುಗಿಬಿದ್ದಿದ್ದರು
ಮಂಗಳವಾರ ಗೌರಿ ಹಬ್ಬ, ಬುಧವಾರ ಗಣೇಶ ಚತುರ್ಥಿ ಪ್ರಯುಕ್ತ ನಗರದೆಲ್ಲೆಡೆ ಖರೀದಿಯ ಭರಾಟೆ ಜೋರಾಗಿತ್ತು. ಮಾರುಕಟ್ಟೆ ನಗರದಲ್ಲಿ ವಿವಿಧೆಡೆ ಜನ ಖರೀದಿಯಲ್ಲಿ ನಿರತರಾಗಿದ್ದರು.
ಹೂವು, ಹಣ್ಣು, ತರಕಾರಿಗಳ ದರ ಮತ್ತಷ್ಟು ಹೆಚ್ಚಾಗಿದ್ದು, ಚಂಡು ಹೂವು ಒಂದು ಮಾರಿಗೆ 100 ರೂ., ಸೇವಂತಿಗೆ 150 ರೂ., ಮಲ್ಲಿಗೆ 200 ರೂ., ಕನಕಾಂಬರ, ಗುಲಾಬಿ, ಸುಗಂಧರಾಜ ಸೇರಿದಂತೆ ವಿವಿಧ ಬಿಡಿ ಹೂವುಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಗೌರಿ, ಗಣೇಶ ಮೂರ್ತಿ ಅಲಂಕಾರಕ್ಕೆ ಬೇಕಾದ ಮಾವಿನ ಎಲೆ, ಬಾಳೆಗಿಡ, ಬಾಳೆ ಎಲೆ ಮಾರಾಟ ನಡೆಯಿತು. ಬಾಳೆ ಕಂದು ಜೋಡಿಗೆ 50 ರೂ., ಒಂದು ಕಟ್ಟು ಮಾವಿನ ಎಲೆಗೆ 20 ರೂ. ಇತ್ತು
ಗೌರಿ ಹಬ್ಬಕ್ಕೆ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಳೆ ತೊಡಿಸುವ ಸಂಪ್ರದಾಯ ಇರುವುದರಿಂದ ನೋಡಲು ಮಸೀದಿ ಬಳೆ ಅಂಗಡಿಗಳಲ್ಲಿಬಣ್ಣ ಬಣ್ಣದ ಬಳೆಗಳ ಖರೀದಿಯಲ್ಲಿ ಮಹಿಳೆಯರು ನಿರತರಾಗಿದ್ದರು. ಜತೆಗೆ ನಗರದ ಸೀರೆ ಅಂಗಡಿಗಳಲ್ಲಿಮಹಿಳೆಯರು ಸೀರೆ ಖರೀದಿಗೆ ಮುಗಿಬಿದ್ದಿದ್ದರು.




