ಹುಮನಾಬಾದ : ತಾಲ್ಲೂಕಿನ ಎಲ್ಲಡೆ ಸತತವಾಗಿ ಎರಡು ದಿನಗಳ ಕಾಲ ಭಾರಿ ಮಳೆ ಸುರಿದ ಪರಿಣಾಮ ತಾಲ್ಲೂಕಿನ ಹುಡಗಿ,ಬೋತಗಿ ಹಾಗೂ ವರವಟ್ಟಿ ಗ್ರಾಮದ ಬ್ರಿಡ್ಜ್ ಗಳು ತುಂಬಿ ಹರಿಯುತ್ತಿವೆ.
ಸದರಿ ಸ್ಥಳಗಳಲ್ಲಿ ಪ್ರಾಣ ಹಾನಿಯಾಗುವ ಸಂಭವ ಕೂಡ ಇರುತ್ತದೆ.ಹೀಗಾಗಿ ಹುಡಗಿ,ಬೋತಗಿ ಮತ್ತು ವರವಟ್ಟಿ ಗ್ರಾಮ ಜನರು ಹೊರಗಡೆ ಹೋಗದಂತೆ ಹಾಗೂ ಹಸು,ಎಮ್ಮ,ಆಡುಗಳಿಗೆ ಬಿಡದಂತೆ ಎಚ್ಚರಿಕೆ ವಹಿಸಿ ತಮ್ಮ ತಮ್ಮ ಮನೆಯಲ್ಲಿಯೇ ಇದ್ದು ಮುಂಜಾಗ್ರತೆ ವಹಿಸಬೇಕು.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಸ್ಥಳಗಳಲ್ಲಿ ಬ್ಯಾರಿಕೆಡ್ ಅಳವಡಿಸಿ ಮುಂಜಾಗ್ರತೆ ಕ್ರಮ ವಹಿಸಲು ಸೂಚನೆ ಕೂಡ ನೀಡಲಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿಗಳು ಹಾಗೂ ತಸಿಲ್ದಾರರು ಆಗಿರುವ ಅಂಜುಮ್ ತಬಸುಮ್ ತಿಳಿಸಿದ್ದಾರೆ.




