ಭಾಲ್ಕಿ : ಸತತವಾಗಿ ಸುರಿಯುತ್ತಿರುವ ಮಳೆಯಿಂದ ಭಾಲ್ಕಿ ತಾಲೂಕಿನ ಆನಂದವಾಡಿ ನೀಡೆಬನ ಹೋಗುವ ಮಾರ್ಗದಲ್ಲಿರುವ ಕಾರಂಜಾ ಬ್ರಿಜ ಕಂ ಬ್ಯಾರೆಜ ಸಂಪೂರ್ಣ ತುಂಬಿ ಮೇಲಿನಿಂದ ನೀರು ಹರಿಯುತ್ತಿರುವ ರಿಂದ ನೀಡೆಬನ ಕೋರುರ,ಕೊಟಗೀರಾ ಗೊರಚಿಂಚೊಳಿ ಹೋಗುವ ರಸ್ತೆ ಬಂದ ಆಗಿದೆ. ಹಾಗೆ ಬೀದರ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಕಷ್ಟ ಪಟ್ಟು ಬೇಳೆದ ಬೆಳೆ ಸಂಪೂರ್ಣ ಹಾಳಾಗಿದೆ ,ಕೈಗೆ ಬಂದ ತುತ್ತು ಬಾಯಿಗೆ ಬಾರದ ಹಾಗೆ ರೈತನ ಪರಿಸ್ಥಿತಿ ಆಗಿದೆ.ಸತತ ಮಳೆಯಿಂದ ರೈತರು ಬೆಳೆದ ಬೇಳೆಗಳಾದ ,ಹೇಸರು,ಉದ್ದು ,ಸೋಯಾ ,ತೋಗರಿ ಬೇಳೆ ನೆಲಕಚ್ಚಿದು ರೈತರು ಸಂಕಷ್ಟದಲ್ಲಿ ದಿನ ದೂಡುವಂತೆ ಮಾಡಿದೆ.

ಹೊಲದಲ್ಲಿನ ಫಲವತ್ತಾದ ಮಣ್ಣು ಕೊಚ್ಚಿ ಹೋಗಿದೆ ಇದ್ದರಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ ಕೂಡಲೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಹಾಗೆ ಜಿಲ್ಲಾಡಳಿತ ಕೂಡಲೆ ಈ ಕಡೆ ಗಮನ ಹರಿಸಿ ಇದರ ಸರ್ವೆ ನಡೆಸಿ ರೈತರಿಗೆ ಒಂದು ಎಕರೆಗೆ 25 ಸಾವಿರ ಸರ್ಕಾರದಿಂದ ಪರಿಹಾರ ಧನವನ್ನು ಒದಗಿಸಬೇಕು .ಹಾಗೆ ಎಷ್ಟು ರೈತರು ಬೆಳೆಯ ವಿಮಾ ಮಾಡಿಸಿದ್ದಾರೆ.ಅಷ್ಟು ರೈತರಿಗೆ ಸೂಕ್ತ ವಿಮಾ ಮೊತ್ತ ಜಮಾ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಯುವ ಕ್ರಾಂತಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಸಂಗಮೇಶ ಭೂರೆ ಆಗ್ರಹಿಸಿದ್ದಾರೆ.
ವರದಿ:ಸಂತೋಷ ಬಿಜಿ ಪಾಟೀಲ




