ಕಾಗವಾಡ :ಬೆಳಗಾವಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಫಯಾಜ್ ಅಹ್ಮದ್ ಶೇಖ್, ಅಥಣಿ ತಾಲೂಕಿನ ಐಗಳಿ ಗ್ರಾಮದಲ್ಲಿ ಜಪ್ತಿ ಮಾಡಲಾಗಿದ್ದ ಮರಳನ್ನು ಸಾಗಾಟ ಮಾಡಲು ಗುತ್ತಿಗೆದಾರನಿಂದ 15 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಈ ಹಿನ್ನೆಲೆಯಲ್ಲಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂಬ ವರದಿ ತಿಳಿದು ಬಂದಿದೆ.
ಟಾಸ್ಕಫೋರ್ಸ್ ಸಮಿತಿ ಸದಸ್ಯರು ಮರಳಿನ ವಿಲೇವಾರಿ ಆದೇಶ ನೀಡಲು ಈ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ಮೇರೆಗೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ವರದಿ :ರಾಜು ಮುಂಡೆ




