ವಕೀಲನ ಮೇಲೆ ಹಲ್ಲೆ ಕೌಂಟರ್ ಕೇಸ್ ದಾಖಲು ಮಾಡಿದಕ್ಕೆ ಪಾವಗಡ ಪಟ್ಟಣದ ಪೋಲಿಸ್ ಠಾಣೆ ಮುಖ್ಯ ಅಧಿಕಾರಿಗಳು ಅಮಾನತ್ತುಗೆ.ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್ ಶೇಷನಂದನ್ ಒತ್ತಾಯ.
ತುಮಕೂರು :ಜಿಲ್ಲೆ ಪಾವಗಡ ತಾಲ್ಲೂಕು ನಲ್ಲಿ ನಾಲ್ಕೈದು ದಿನಗಳ ಹಿಂದೆ ಮಾರಣಾಂತಿಕ ಹಲ್ಲೆಗೆ ಒಳಗಾದ ವಕೀಲ ಸುಧಾಕರನ ಮೇಲೆ ರಾಜಕಾರಣಿಗಳ ಒತ್ತಡಕ್ಕೆ ಮಣೆದು ಕೌಂಟರ್ ಕೇಸ್ ದಾಖಲಿಸುವ ಪೋಲಿಸ್ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕೆಂದು ವಕೀಲರ ಸಂಘದಿಂದ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ಎಚ್ ಶೇಷನಂದನ್ ಒತ್ತಾಯ ಮಾಡಿದರು.
ಪಾವಗಡ ಪಟ್ಟಣದಲ್ಲಿ ದಿನಾಂಕ,28/08/25 ಗುರುವಾರರಂದು ಜೆಎಂಎಫ್ ಸಿ ನ್ಯಾಯಾಲಯ ರಸ್ತೆಯಿಂದ ಅಂಬೇಡ್ಕರ್ ವೃತ್ತ ಶನೈಶ್ವರ ದೇವಸ್ಥಾನ ವೃತ್ತದವರಗೆ ಜಾತ ನಡೆಸಿ ತಹಶೀಲ್ದಾರ್ ಕಚೇರಿಯ ಮುಂದೆ ಇರುವ ಬಳ್ಳಾರಿ ಮಾರ್ಗದರ್ಶನ ಇರುವ ರಸ್ತೆ ತಡೆದು ಪ್ರತಿಭಟನೆ ನಡೆಸಿ ವಕೀಲ ಸುಧಾಕರ್ ವಿರುದ್ಧ ಕೌಂಟರ್ ಕೇಸ್ ದಾಖಲು ಮಾಡಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಇವರನ್ನು ಅಮಾನತ್ತು ಮಾಡಬೇಕೆಂದು ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಶೇಷಾನಂದನ್ ತಾಲೂಕಿನಲ್ಲಿ ಪೊಲೀಸ್ ಅಧಿಕಾರಿಗಳು ಸ್ವಯಿಚ್ಛೆಯಿಂದ, ಕಾನೂನಾತ್ಮವಾಗಿ, ಕಾರ್ಯನಿರ್ವಹಿಸದೆ ರಾಜಕಾರಣಿಗಳ ಒತ್ತಡಕ್ಕೆ ಮಣೆದು ಹಲ್ಲೇಗೊಳಗಾದ ವಕೀಲನ ಸುಧಾಕರನ ಮೇಲೆ ಕೌಂಟರ್ ಕೇಸ್ ದಾಖಲಿಸಿರುವುದು ಅಮಾನವೀಯ ಘಟನೆಯಾಗಿದೆ. ಜನಸಾಮಾನ್ಯರಿಗೆ ನ್ಯಾಯ ಒದಗಿಸುವ ವಕೀಲರಿಗೆ ಭದ್ರತೆ ಹಾಗೂ ನ್ಯಾಯ ಕಲ್ಪಿಸುವಲ್ಲಿ ಪೊಲೀಸ್ ಅಧಿಕಾರಿಗಳು ವಿಫಲರಾಗಿರುವುದು ಖಂಡನೇಯ ವಿಷಯವಾಗಿದೆ ಎಂದು ಶೇಷನಂದನ್ ಮನುಸ್ಥಾಪದಿಂದ ತಿಳಿಸಿರುತ್ತಾರೆ.
ನಂತರ ಇಲಾಖೆಯ ಮೇಲೆ ಪ್ರತಿಯೊಬ್ಬರಿಗೂ ಅಪಾರ ಗೌರವ ಮತ್ತು ನ್ಯಾಯ ಸಿಗುವುದೆಂದು ನಂಬಿ ಠಾಣೆಗೆ ಬರುತ್ತಾರೆ ಭದ್ರತೆ ಮತ್ತು ನ್ಯಾಯ ಒದಗಿಸುವ ಪೋಲಿಸ್ ಇಲಾಖೆಯವರು ಸುಳ್ಳು ಕೇಸು ದಾಖಲಿಸಿ. ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇದೇ ವೇಳೆಯಲ್ಲಿ ಮಾತನಾಡಿದ ತಹಸಿಲ್ದಾರ್ ವರದರಾಜ ಮಾತನಾಡಿ ಈ ದಿನ ನಮಗೆ ನೀಡಿರುವ ಮನವಿ ಪತ್ರ ದೊಂದಿಗೆ ಮಾರಣಾಂತಿಕ ಹಲ್ಲೆಗೆ ಒಳಗಾದ ವಕೀಲ ಸುಧಾಕರನ ಮೇಲೆ ಕೌಂಟರ್ ಕೇಸ್ ದಾಖಲಿಸಿರುವುದು ಖಂಡಿಸಿ ಪೊಲೀಸರ ವಿರುದ್ಧ ಪ್ರತಿಭಟನೆ ಹಾಗೂ ಮನವಿ ಪತ್ರ ಸಲ್ಲಿಸಿದ್ದೀರಾ ಈ ಮನವಿ ಪತ್ರವನ್ನು ತಕ್ಷಣವೇ ಪರಿಗಣಿಸಿ ಮೇಲಾಧಿಕಾರಿಗಳಿಗೆ ಮಾಹಿತಿ ತಿಳಿಸಿ ಪೊಲೀಸ್ ಇಲಾಖೆಯ ಮುಖ್ಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ವಹಿಸುತ್ತೇವೆಂದು ಹೇಳಿದ್ದರು.
ಈ ಸಂದರ್ಭದಲ್ಲಿ ತಾಲ್ಲೂಕು ವಕೀಲರ ಸಂಘದ ಉಪಾಧ್ಯಕ್ಷ ಹನುಮಂತರಾಯ ಎಸ್, ಕಾರ್ಯದರ್ಶಿ ಪ್ರಭಾಕರ ರೆಡ್ಡಿ, ಶಿವಕೇಶ್ವ ರೆಡ್ಡಿ, ಪುರುಷೋತ್ತಮರೆಡ್ಡಿ,ನರಸಿಂಹ ರೆಡ್ಡಿ,ತಿರುಮಲೇಶ, ನಾಗೇಂದ್ರಪ್ಪ, ವೆಂಕಟರಾಮರೆಡ್ಡಿ, ಸತ್ಯನಾರಾಯಣ, ರಘುನಂದನ್, ಅಂಬರೀಶ್, ಎಸ್ ಟಿ ನರಸಿಂಹ, ಗೌಸ್ಯಾ ಬಾನು, ರಮ್ಯಾ,ಉಗ್ರಮೂರ್ತಿ, ಮಂಜುನಾಥ, ತೇಜಸ್ವಿನಿ, ನಾಗೇಶ್,ಜಯಸಿಂಹ,ಆಂಜನೇಯ, ರಂಗನಾಥಪ್ಪ,ಕೃಷ್ಣ ನಾಯ್ಕ್, ಮಲ್ಲೇಶ್, ಶಾಮಣ್ಣ, ಪೆದ್ದಯ್ಯ, ಮಾರುತಿ ,ಕೃಷ್ಣ, ಸುಬ್ರಹ್ಮಣ್ಯ, ವೆಂಕಟಸ್ವಾಮಿ, ರಾಜಶೇಖರ ರವೀಂದ್ರಪ್ಪ, ಅಂಜಿಗೌಡ, ರಾಮಾಂಜನೇಯ, ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ: ಶಿವಾನಂದ




