ಲಿಂಗಸ್ಗೂರು : ಹಟ್ಟಿ ಚಿನ್ನ ಗಡಿ ಪಟ್ಟಣದ ದಿವಂಗತ ಕಾಮ್ರೇಡ್ ಅಮರಗುಂಡಪ್ಪ ನೇಲುಗಿ ಬಸ್ ನಿಲ್ದಾಣದ ಹತ್ತಿರ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಒಂದು ದಿನದ ಸಾಂಕೇತಿಕ ಧರಣಿ ನಡೆಸಿದರು ಮಾನ್ಯ ಸಹಾಯಕ ಆಯುಕ್ತರು ಲಿಂಗಸ್ಗೂರು , ಇವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಚಾಲಕರಾದ ಕೆ ವಿ ಕಳ್ಳಿಮಠ ಮಾತನಾಡಿ ಹಟ್ಟಿ ಪಟ್ಟಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಜನರು ಬೋರ್ವೆಲ್ ನೀರು ಕುಡಿಯುವ ಪರಸ್ಥಿತಿ ನಿರ್ಮಾಣವಾಗಿದೆ ಮತ್ತು ಹಟ್ಟಿ ಕಂಪನಿಯ ಹೊಸ ಬಸ್ ನಿಲ್ದಾಣದ ಹತ್ತಿರ ಇರುವ ಹಟ್ಟಿ ಕಂಪನಿ ನಿರ್ಮಾಣ ಮಾಡಿದ ಕುಡಿಯುವ ನೀರಿನ ನಲ್ಲಿಯಿಂದ ದಿನನಿತ್ಯ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಇದಕ್ಕೆ ಹಟ್ಟಿ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿಯ ನಿರ್ಲಕ್ಷವೇ ಕಾರಣ ಎಂದು ಹೇಳಿದರು ಹಟ್ಟಿ ಪಟ್ಟಣವು ಸುಮಾರು 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದ್ದು ಈಗಾಗಲೇ ಹಟ್ಟಿ ಪಟ್ಟಣವನ್ನು ತಾಲೂಕು ಎಂದು ಘೋಷಣೆ ಮಾಡಬೇಕೆಂದು, ಹಟ್ಟಿ ಪಟ್ಟಣ ಪಂಚಾಯಿತಿಯನ್ನು ಮೇಲ್ದರ್ಜೆಗೇರಿಸಿ ಪುರಸಭೆಯನ್ನಾಗಿ ಘೋಷಿಸಬೇಕೆಂದು ಒತ್ತಾಯ ಮಾಡಿದರು
ಹಟ್ಟಿ ಇಂದ ಗುರುಗುಂಟಾ ಗ್ರಾಮಕ್ಕೆ ಹೋಗುವ ಆಸ್ತಿ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ದಿನನಿತ್ಯ ನರಕಯಾತನೇ ಅನುಭವಿಸುತ್ತಿದ್ದಾರೆ ಮತ್ತು ಪ್ರಾಮುಕಲ್ಲು ಕ್ರಾಸ್ ರಸ್ತೆಗೆ ಹೊಂದಿಕೊಂಡಂತ ಸೇತುವೆ ಮಳೆ ಬಂದಾಗ ಸೇತುವೆ ಮೇಲೆ ನೀರು ಬರುವುದರಿಂದ ಸೇತುವೆಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಾಣ ಮಾಡಬೇಕು ರಸ್ತೆಯನ್ನು ಮೇಲ್ದರ್ಜೆಗೇರಿಸಿ ನಿರ್ಮಾಣ ಮಾಡಬೇಕು ಒತ್ತಾಯಿಸಿದರು ಹಟ್ಟಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೇರಿಸಿ ಸಂಬಂಧಪಟ್ಟ ವೈದ್ಯರನ್ನು ನೇಮಕ ಮಾಡಬೇಕು.
ಇನ್ನು ಅನೇಕ ಬೇಡಿಕೆಗಳೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣ ಹಟ್ಟಿ ಘಟಕ ಮನವಿ ಸಲ್ಲಿಸುವ ಮೂಲಕ ಸಾಂಕೇತಿಕ ಧರಣಿ ಅಂತ್ಯಗೊಳಿಸಿದರು ಈ ಸಂದರ್ಭದಲ್ಲಿ ಲಿಂಗಸುಗೂರು ತಾಲೂಕ ಅಧ್ಯಕ್ಷರಾದ ಮಾದೇಶ ಸರ್ಜಾಪುರ್ , ಕೆ ವಿ ಕಳ್ಳಿಮಠ, ಜೆ ನಾರಾಯಣ್, ಹಟ್ಟಿ ಘಟಕದ ಅಧ್ಯಕ್ಷರಾದ ಮೌನೇಶ್ ಕಾಕಾ ನಗರ, ವೀರೇಶ್, ವೇಲು ಮುರುಗನ್, ರಾಮಾಂಜನೇಯ, ರಾಮಪ್ಪ ಯಾದವ್, ನಂದಯ್ಯ, ಸಿದ್ರಾಮಪ್ಪ ಕಡ್ಲಿ, ಈರಣ್ಣ, ಬಾಳಪ್ಪ ಆನ್ವರಿ, ಸೇರಿದಂತೆ ಅನೇಕ ಕರ್ನಾಟಕ ರಕ್ಷಣಾ ವೇದಿಕೆ ಯ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




