ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತ ಲೇಖಕಿ, ಸಾಹಿತಿ ಬಾನು ಮುಷ್ತಾಕ್ ಅವರು ಹಸುವಿನ ಮಾಂಸ ತಿನ್ನುತ್ತಾರೆ ಎಂಬುದಾಗಿ ವಿಪಕ್ಷ ನಾಯಕ ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಸಾಹಿತಿ ಬಾನು ಮುಷ್ತಾಕ್ ಹಸುವಿನ ಮಾಂಸ ಅವರು ಗೋಪೂಜೆ, ನಂದಿ ಪೂಜೆ ಹೇಗೆ ಮಾಡುತ್ತಾರೆ? ಒಂದು ಕಡೆ ಹಸುವನ್ನ ಕಡಿದು ತಿನ್ನುವವರು ಅವರು. ಹಾಗಿದ್ದಾಗ ಅದನ್ನ ಪೂಜೆ ಮಾಡೋದು ಹೇಗೆ ಸಾಧ್ಯ ಎಂಬುದಾಗಿ ಪ್ರಶ್ನಿಸಿದ್ದಾರೆ.




