ಗೋಕಾಕ : ಗಣೇಶ ಹಬ್ಬದ ನಿಮಿತ್ಯ ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಿ ಪೋಲಿಸರಿಗಿರುವ ದೈವ ಭಕ್ತಿಯನ್ನು ತೊರಿದ್ದಾರೆ.

ಮುಂಜಾನೆ 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಗ್ರಾಮೀಣ ಪಿಎಸ್ಐ ಕೆ ವಾಲಿಕಾರ ದಂಪತಿಗಳು ಶ್ರೀಸತ್ಯನಾರಾಯಣ ಪೂಜೆಯಲ್ಲಿ ಬಾಗಿಯಾಗಿ ದೇವರ ಕೃಪೆಗೆ ಪಾತ್ರರಾದರು.
ಪಿಎಸ್ಐ ಕೆ,ವಾಲಿಕರ ನಿರ್ದೇಶನದಂತೆ ಗ್ರಾಮೀಣ ಬಾಗದ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಲ್ಲಿನ ಜನರಿಗೆ ಗಣೇಶನ ಮಹಾಪ್ರಸಾದ ಸ್ವಿಕರಿಸಲು ಕರೆ ನೀಡಿದ್ದರು. ಅದರಂತೆ ಸುತ್ತಮುತ್ತಲಿನ ಹಳ್ಳಿಗಳ ನೂರಾರು ಜನ ಗಣೇಶನ ಆಶಿರ್ವಾದ ಪಡೆದು ಮಹಾಪ್ರಸಾದ ಸ್ವೀಕರಿಸಿ ಪುನಿತರಾದರು.

ಇನ್ನು ದಿನಾಲು ಕೈಯಲ್ಲಿ ಯಾವುದಾರೊಂದು ವಾರಂಟ ಹಿಡಿದುಕೊಂಡು ಸುತ್ತಾಡುತಿದ್ದ ಪೋಲಿಸ್ ಸಿಬ್ಬಂದಿಗಳು ಕರ್ತವ್ಯ ಮಾಡುತ್ತಾ ಆಗಮಿಸುತಿದ್ದ ಭಕ್ತರಿಗೆ ಜನರಿಗೆ ಮಹಾಪ್ರಸಾದ ಬಡಿಸುವಲ್ಲಿ ನಿರತರಾಗಿದ್ದರು.
ಈ ಸಂದರ್ಬದಲ್ಲಿ ಸಿಪಿಆಯ್ ಸುರೆಶಬಾಬು ,ಆರ್,ಗ್ರಾಮೀಣ ಪ್ರದೇಶದಿಂದ ಆಗಮಿಸಿದ ಮುಖಂಡರು,ಗ್ರಾಮೀಣ ಪೊಲಿಸ್ ಠಾಣೆಯ ಸರ್ವ ಸಿಬ್ಬಂದಿಗಳು ವಿಘ್ನ ನಿವಾರಕ ಗಣೇಶನ ಮಹಾಪ್ರಸಾದದ ಜೊತೆಯಲ್ಲಿ ತಮ್ಮ ಕರ್ತವ್ಯ ಕೂಡ ಮಾಡಿದರು.
ಮನೋಹರ ಮೇಗೇರಿ




