ಯಳಂದೂರು: ಪಟ್ಟಣದ ಬಳೆಪೇಟೆಯಲ್ಲಿ ಮುಸ್ಲಿಂ ಸಮುದಾಯದ ಜನರಿಗೆ 50 ಲಕ್ಷದ ಅನುದಾನದಲ್ಲಿ ಶಾದಿ ಮಹಲ್ ಕಟ್ಟಡವನ್ನು ನಿರ್ಮಿಸಲು ಕೊಳ್ಳೆಗಾಲ ಕ್ಷೇತ್ರದ ಶಾಸಕರಾದ ಎ ಆರ್ ಕೃಷ್ಣಮೂರ್ತಿ ರವರು ಹಾಗೂ ಮುಸ್ಲಿಂ ಸಮುದಾಯದ ಗುರುಗಳಾದ ಅಬ್ರಹೀಂ ಅಹ್ಮದ್ ರವರು ಅಲ್ಲಾನನ್ನು ಸ್ಮರಿಸುತ್ತಾ ಭೂಮಿ ಪೂಜೆಯನ್ನು ನೆರವೇರಿಸಿದರು.
ಶಾಸಕರಾದ ಎ ಆರ್ ಕೃಷ್ಣ ಮೂರ್ತಿ ರವರು ಮಾತನಾಡಿ ನನ್ನ ಕ್ಷೇತ್ರದ ಅಭಿವೃದ್ಧಿಗೆ ಮಂಜೂರಾದ ಹಣದಲ್ಲಿ 50 ಲಕ್ಷ ಹಣವನ್ನು ಮುಸ್ಲಿಂ ಸಮುದಾಯದವರಿಗೆ ಶಾದಿ ಮಹಲ್ ನಿರ್ಮಾಣಕ್ಕೆ ನೀಡಿದ್ದೇನೆ ಮುಸ್ಲಿಂ ಸಮುದಾಯವು ನಮ್ಮ ಸರ್ಕಾರ ಬರಲು ಹಾಗೂ ನನ್ನ ಗೆಲುವಿನಲ್ಲೂ ಜೋತೆಯಲ್ಲಿದಾರೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಯ ಜಿಲ್ಲಾ ಅಧ್ಯಕ್ಷರಾದ ಹೊಂಗನೂರು ಚಂದ್ರು ರವರು ಮಾತನಾಡಿ ಯಳಂದೂರು ತಾಲೂಕಿನಾದ್ಯಂತ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದ್ದೇವೆ ಆದರೆ ಮೊದಲ ಬಾರಿಗೆ ಮುಸ್ಲಿಂ ಸಮುದಾಯದವರಿಗೆ ಯಳಂದೂರಿನಲ್ಲಿ ಇದೆ ಮೊದಲು ಕಾಮಗಾರಿಗೆ ಶಂಕುಸ್ಥಾಪನೆ ಯಾಗಿರುವುದು ಎಂದರು.
ಯೋಗೇಶ್ ರವರು ಮಾತನಾಡಿ ಮುಸ್ಲಿಂ ಸಮುದಾಯದ ಜನರು ಯಾವಾಗಲು ಕಾಂಗ್ರೆಸ್ ಪಕ್ಷದ ಪರವಾಗಿದ್ದರೆ ನಮ್ಮ ಸರ್ಕಾರದ ಅಧಿಕಾರಕೆ ಅವರ ಕೊಡುಗೆ ಇದೆ ಎಂದರು. ಮುಸ್ಲಿಂ ಯಜಮಾನರುಗಳು ಮತ್ತು ಮುಖಂಡರುಗಳಿಂದ ಗಣ್ಯರಿಗೆ ಗೌರವ ಸನ್ಮಾನ ಮಾಡಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷರಾದ ಜಿ ಯೋಗೇಶ್ ರವರು, ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಹಾಗೂ ಸದಸ್ಯರುಗಳು, ಮುಸ್ಲಿಂ ಸಮುದಾಯದ ಮುಖಂಡರುಗಳು, ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ




