————————————-ಅಡುಗೆ ಬಟ್ಟರಾದ ಪೊಲೀಸರು
ಗೋಕಾಕ : ಗಣೇಶ ಹಬ್ಬದ ನಿಮಿತ್ಯ ಸಾರ್ವಜನಿಕರಿಗೆ ನಗರ ಪೊಲಿಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಮಹಾಪ್ರಸಾದದ ಸಮಯದಲ್ಲಿ ಪೋಲಿಸರು ಅಡುಗೆ ಬಟ್ಟರಾಗಿ ಕಾರ್ಯನಿರ್ವಹಿಸಿದರು.

ಪ್ರತಿ ವರ್ಷದಂತೆ ಈ ವರ್ಷವು ಕೂಡ ಸಾರ್ವಜನಿಕರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಿ ನಗರ ಪಿಎಸ್ಐ ಕಿರಣ ಮೊಹಿತೆಯವರು ಪೋಲಿಸ್ ಠಾಣೆಯ ಗೇಟ ಬಳಿ ನಿಂತು ಬರುವವರನ್ನು ಸ್ವಾಗತಿಸುತಿದ್ದರು.

ಮುಂಜಾನೆ 10 ಗಂಟೆಗೆ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಎ,ಎಸ್,ಐ, ರಮೇಶ ಉಪ್ಪಾರ ದಂಪತಿಗಳು ಶ್ರೀಸತ್ಯನಾರಾಯಣ ಪೂಜೆಯಲ್ಲಿ ಬಾಗಿಯಾಗಿ ದೇವರಲ್ಲಿ ಶಾಂತಿ ನೆಮ್ಮದಿಗಾಗಿ ಪ್ರಾರ್ಥಿಸಿದರು.

ಇವತ್ತಿನ ಮಹಾಪ್ರಸಾದ ಬಗ್ಗೆ ತಿಳಿದು ಪರಸ್ಥಗಳಿಂದ ನಗರಕ್ಕೆ ಬಂದ ಸಾರ್ವಜನಿಕರನ್ನು ಪಿಎಸ್ಐ ಕಿರಣ ಮೊಹಿತೆ ಕರೆದು ಮಹಾಪ್ರಸಾದ ಸ್ವಿಕರಿಸಲು ತಿಳಿಸಿದರು. ಇನ್ನು ಬಂದಂತಹ ಸಾರ್ವಜನಿರಿಗೆ ಮಾಡಿಸಿದ್ದ ಅಡುಗೆ ಕಡಿಮೆ ಬಿಳದಂತೆ ನೋಡಿಕೊಳ್ಳಲು ಪೋಲಿಸರು ಅಡುಗೆ ಬಟ್ಟರಂತೆ ತಾವೆ ಸಿದ್ದಪಡಿಸಿದರು.
ಹಲವಾರು ನಗರ ಪೋಲಿಸರು ಸಾರ್ವಜನಿಕರಿಗೆ ಪ್ರಸಾದ ನೀಡುವಲ್ಲಿ ನಿರತರಾಗಿದ್ದರೆ, ಕರ್ತವ್ಯದ ಜೊತೆಯಲ್ಲಿ ಹೆಚ್ಚುವರಿ ಪಿಎಸ್ ಐ ನಿಖೀಲ ಕಾಂಬಳೆ ಇವರು ಊಟದ ವ್ಯವಸ್ಥೆ ನೋಡಿಕೊಂಡಿದ್ದರು. ಇವತ್ತಿನ ಮಹಾಪ್ರಸಾದಕ್ಕೆ ಡಿವಾಯ್ ಎಸ್ಪಿ,ರವಿ ನಾಯಕ ,ಸಿಪಿಆಯ್ ಸುರೇಶಬಾಬು,ಆರ್, ಸೇರಿದಂತೆ ಕೆಎಸ್ಆರ್ಟಿಸಿ,ಸಿಬ್ಬಂದಿಗಳು,ಬೀದಿ ವ್ಯಾಪಾರಸ್ಥರು ಸೇರಿದಂತೆ ನೂರಾರು ಜನ ಗಣೇಶನ ಪ್ರಸಾದ ಸ್ವೀಕರಿಸಿ ಪುನಿತರಾದರು.
ಮನೋಹರ ಮೇಗೇರಿ




