ಕರಾವಳಿ ಭಾಗದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ

ಮಂಗಳೂರು: ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಶನಿವಾರವೂ ಭಾರಿ ಮಳೆಯಾಗಿದ್ದು, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಕೊಡಗು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಉತ್ತರ ಕನ್ನಡದ ಹೊನ್ನಾವರ ತಾಲ್ಲೂಕಿನಲ್ಲಿ, ಹಗಲಿನಲ್ಲಿ ನಿರಂತರ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಆಗಸ್ಟ್ 30 ರಂದು ಎಲ್ಲ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಹೆಚ್ಚಳ: ತೇಜಸ್ವಿ ಯಾದವ್

ಪಾಟ್ನಾ: ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಮೀಸಲಾತಿ ಕೋಟಾವನ್ನು ಶೇ.85ಕ್ಕೆ ಏರಿಕೆ ಮಾಡುವುದಾಗಿ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ.
ಬಿಹಾರದ ಮೋತಿಹಾರಿಯಲ್ಲಿ ನಡೆಯುತ್ತಿರುವ ಮತದಾರರ ಅಧಿಕಾರ ಯಾತ್ರೆಯ ಅಂಗವಾಗಿ ಸಂವಿಧಾನ ಸುರಕ್ಷಾ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ತೇಜಸ್ವಿಯಾದವ್, ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಜನರು ತಮ್ಮ ಹಕ್ಕುಗಳನ್ನು ಕಾಪಾಡಲು ಒಂದಾಗಬೇಕು ಎಂದು ಹೇಳಿದರು.
ದಸರಾ ಚಿತ್ರೋತ್ಸವಕ್ಕೆ ಹತ್ತು ಕಿರುಚಿತ್ರಗಳ ಆಯ್ಕೆ

ಮೈಸೂರು: ನಗರದ ಹೆಮ್ಮೆಯ, ಸಾಂಸ್ಕೃತಿಕ ಸಭ್ರಮವಾದ ‘ಮೈಸೂರು ದಸರಾ’ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು, ಸೆಪ್ಟಂಬರ್ 22 ರಿಂದ 11 ದಿನಗಳ ಕಾಲ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ದಸರಾ ಅಂಗವಾಗಿ, ‘ದಸರಾ ಚಲನಚಿತ್ರೋತ್ಸವ’ ಉಪಸಮಿತಿ ವತಿಯಿಂದ ಈ ಕಿರುಚಿತ್ರ ಸ್ಪರ್ಧೆ ನಡೆದಿದೆ.
‘ದಸರಾ ಚಲನಚಿತ್ರೋತ್ಸವ 2025’ ಅಂಗವಾಗಿ ಕಿರುಚಿತ್ರ ಸ್ಪರ್ಧೆ ಆಯೋಜಿಸಲಾಗಿತ್ತು. 34 ಕಿರುಚಿತ್ರಗಳು ಸಲ್ಲಿಕೆಯಾಗಿ, ಸಿನಿಮಾ ತಂತ್ರಜ್ಞರಿಂದ ಕಿರು ಚಿತ್ರಗಳ ವೀಕ್ಷಣೆ ಪ್ರಕ್ರಿಯೆ ನಡೆಯಿತು. ಈ ಬಾರಿಯ ಕಿರುಚಿತ್ರ ಸ್ಪರ್ಧೆಗೆ 34 ಸಿನಿಮಾಗಳು ನೋಂದಣಿಗೊಂಡಿದ್ದು, ಎಲ್ಲವೂ ಒಂದಕ್ಕಿಂತ ಒಂದು ವಿಭಿನ್ನ ರೀತಿಯ ಕಥಾವಸ್ತುವನ್ನು ಹೊಂದಿವೆ. ಸ್ಪರ್ಧೆಯಲ್ಲಿ ಆಯ್ಕೆಯಾದ ಚಿತ್ರಗಳನ್ನು ಐನಾಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ಮಾಡಲಾಗುವುದು.
ಹಟ್ಟಿ ಕಾ ಛೋಟಾ ಮಹಾರಾಜ್ ಗಣೇಶ ಮಂಡಳಿಯಿಂದ ಅನ್ನ ಸಂತರ್ಪಣೆ

ಲಿಂಗಸ್ಗೂರು : ಹಟ್ಟಿ ಚಿನ್ನದ ಗಣಿ ಪಟ್ಟಣದ ಹಳೆ ಪಂಚಾಯತ್ ಹತ್ತಿರ ಹಟ್ಟಿ ಕಾ ಛೋಟಾ ಮಹಾರಾಜ್ ಗಣೇಶ ಮಂಡಳಿಯಿಂದ ಇಂದು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು ಪುಟ್ಟ ಪುಟ್ಟ ಮಕ್ಕಳು ಗಣೇಶನ ಮೂರ್ತಿಯನ್ನು ಎರಡನೇ ವರ್ಷ ಪ್ರತಿಷ್ಠಾಪಿಸುವ ಮೂಲಕ ಗಣೇಶ್ ಚತುರ್ಥಿಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆಯಲ್ಲಿ ತೊಡಗಿದ್ದರು,
ಹಟ್ಟಿ ಪ. ಪಂ. ಅಧ್ಯಕ್ಷ ಎಂ.ಡಿ ಸಂಧಾನಿ, ಕಾಂಗ್ರೆಸ್ ಮುಖಂಡ ಅಮ್ಜದ್ ಸೇಟ್, ರಮೇಶ್ ಹುಳಿಮಹೇಶ್ವರ, ಶಿವು ನಾಯಕ್ ತಬಲಾಜಿ, ಹನುಮಂತ್ ರೆಡ್ಡಿ, ಪರಮೇಶ್ ಯಾದವ್, ಬಸವರಾಜ ಪೈ, ದೇವೇಂದ್ರಪ್ಪ, ಬಲವಂತ, ವೆಂಕೋಬ ಪವಡಿ, ಗೋವಿಂದ ನಾಯಕ್, ಶರಣಗೌಡ ಗುರಿಕಾರ್, ಅಂಬೇಡ್ಕರ್ ಸಂಘದ ಅಧ್ಯಕ್ಷ ವಿನೋದ್, ಯೋಗಪ್ಪ ದೊಡ್ಮನಿ,ಶಿವರಾಜ್ ಟೈಲರ್, ಗಂಗಪ್ಪ ಶಾಕೋದಿ ಕಾರ್ಮಿಕ ಮುಖಂಡರು, ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ
ಅಂಬೇಡ್ಕರ್ ಯುವ ಸೇನೆಯ ಗುರುಮಠಕಲ್ ಅಧ್ಯಕ್ಷ್ಯ ಸ್ಥಾನಕ್ಕೆ ಮುರುಳಿಧರ್ ರಾಜೀನಾಮೆ

ಗುರುಮಠಕಲ್ : ಗುರುಮಠಕಲ್ ತಾಲೂಕಿನ ತಾಲೂಕು ಅಧ್ಯಕ್ಷನಾಗಿ ಮುರುಳಿಧರ್ ಮೌರ್ಯ, ಕಳೆದ ಸುಮಾರು ಎಂಟು ವರ್ಷಗಳಿಂದ ಅಂಬೇಡ್ಕರ್ ಯುವ ಸೇನೆಗೆ ಶ್ರದ್ಧೆಯಿಂದ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದೇನೆ ನನ್ನ ಅನಧಿಯಲ್ಲಿ ಸಂಘಟನೆಗೆ ಯಾವದೆ ರೀತಿ ಕಳಂಕವನ್ನೂಂಟುಮಾಡುವ ಕೆಲಸ ಮಾಡಿರುವದಿಲ್ಲ ಎಂದು ಅವರ ಅಭಿಪ್ರಾಯ ವ್ಯಕ್ತಪಡಿಸಿದರು.
ಆದರೆ ಕೆಲವು ದಿನಗಳಿಂದ ಕಲಬುರ್ಗಿ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ ಅವರ ನಡೆ ನನ್ನ ಮನಸ್ಸಿಗೆ ನೋವುಂಟುಮಾಡಿದ್ದು, ಈ ಹಿನ್ನೆಲೆಯಲ್ಲಿ ಮುರುಳಿಧರ್ ಮೌರ್ಯ ಅಂಬೇಡ್ಕರ್ ಯುವ ಸೇನೆ ಗುರುಮಠಕಲ್ ತಾಲೂಕ್ ಮಾಜಿ ಅಧ್ಯಕ್ಷರು ಆದಂತಹ ನಾನು ಸ್ಮಇಚ್ಛೆಯಿಂದ ಅಂಬೇಡ್ಕರ್ ಯುವ ಸೇನೆಯನ್ನೂ ರಾಜಿನಾಮೆ ನೀಡಿದ್ದಾರೆ ಇನ್ನು ಮುಂದೆ ನನ್ನ ನಡೆ ರಾಜ್ಯದ ಕಡೆ ಎಂದು ಜಿಲ್ಲಾ ಅಧ್ಯಕ್ಷರ ನಡತೆ ಯಿಂದ್ ನೊಂದ ಮುರಳಿದರ್ ತಮ್ಮ ರಾಜಿನಾಮೆ ಕೊಟ್ಟಿದ್ದಾರೆ. ವರದಿ : ರವಿ ಬುರನೋಳ್
ಮಿಟ್ಟಿ ಮಲ್ಕಾಪುರ ಕಲ್ಲು ಗಣಿಗಾರಿಕೆ ಪೀಡಿತ ಪ್ರದೇಶದ ಮೇಲೆ ಸುಮೋಟೊ ಪ್ರಕರಣ ದಾಖಲು

ರಾಯಚೂರು : ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಬಿ ವೀರಪ್ಪ ಅವರಿಂದ ಮೂರನೇ ದಿನವಾದ ಆಗಸ್ಟ್ 30ರಂದು ಅನಿರೀಕ್ಷಿತ ಭೇಟಿಯ ಮಿಂಚಿನ ಕಾರ್ಯಾಚರಣೆ ನಡೆಯಿತು. ಚಹಾ ವಿರಾಮದ ನಂತರ ಕೃಷಿ ವಿವಿಯಿಂದ ಬೆಳಗ್ಗೆ 7 ಗಂಟೆಗೆ ನಿರ್ಗಮಿಸಿದ ಉಪ ಲೋಕಾಯುಕ್ತರು, ಸಿಟಿ ಹೊರ ವಲಯದ ಮಂತ್ರಾಲಯ ರಸ್ತೆಗೆ ಹೊರಟು ಮಿಟ್ಟಿ ಮಲ್ಕಾಪುರದ
ಶ್ರೀ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ (ಎಂ ಸ್ಯಾಂಡ್ ) ಪ್ರವೇಶ ಮಾಡಿದರು. ಮೊದಲಿಗೆ ವೆಂಕಟೇಶ್ವರ ಮಿನಿರಲ್ಸ್ ಸ್ಟೋನ್ ಕ್ರಷರ್ ಪ್ರದೇಶದಲ್ಲಿ ಸಂಚರಿಸಿ ಗಣಿಗಾರಿಕೆ ನಂತರ ಹಾಗೆಯೇ ಬಿಟ್ಟ ಕಂದಕದ ವೀಕ್ಷಣೆ ನಡೆಸಿದರು.
ಇದನ್ನು ಸಮತಟ್ಟು ಯಾಕೆ ಮಾಡಿಲ್ಲ? ಗಿಡ ಯಾಕೆ ನೆಟ್ಟಿಲ್ಲ?. ಇದನ್ನು ನೀವು ನೋಡಿಲ್ವಾ? ಲೀಸ್ ಪಡೆದ
ಕಂಪನಿಯವರು ಕಾನೂನು ಉಲ್ಲಂಘನೆ ಮಾಡಿದಾರೆ ಅಂತ ಗೊತ್ತಾದಾಗಲೂ ನೀವು ನಿದ್ದೆ ಮಾಡತಿದೀರಾ? ಎಂದು ಗಣಿ ಇಲಾಖೆಯ ಅಧಿಕಾರಿಗಳಿಗೆ ಉಪ ಲೋಕಾಯುಕ್ತರು ತರಾಟೆ ತೆಗೆದುಕೊಂಡರು. ಬಳಿಕ ಲೋಕಾಯುಕ್ತರು, ಓಂ ಶಕ್ತಿ ಕಂಪನಿಯ ಮತ್ತೊಂದು ಕಲ್ಲು ಗಣಿಗಾರಿಕೆ ಪ್ರದೇಶಕ್ಕೆ ತೆರಳಿ ಗಣಿಪೀಡಿತ ಪ್ರದೇಶದಲ್ಲಿ ಅಂದಾಜು 100 ಅಡಿ ಆಳವಾಗಿ ಕೊರೆದ ಕಂದಕದ ವೀಕ್ಷಣೆ ನಡೆಸಿದರು.



