ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 12 ಯಾವಾಗಲಿಂದ ಪ್ರಾರಂಭವಾಗಲಿದೆ ಎನ್ನುವಂತ ದಿನಾಂಕವನ್ನು ನಟ ಕಿಚ್ಚ ಸುದೀಪ್ ಘೋಷಣೆ ಮಾಡಿದ್ದಾರೆ.ಈ ಮೂಲಕ ಕನ್ನಡದ ಬಿಗ್ ಬಾಸ್ ಸೀಸನ್ 12 ಯಾವಾಗ ಪ್ರಾರಂಭವಾಗಲಿದೆ ಎನ್ನುವಂತ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಈಗಾಗಲೇ ಕನ್ನಡದ ಬಿಗ್ ಬಾಸ್ ಸೀಸನ್ 12 ಮೊದಲ ಪ್ರೊಮೋ ಬಿಡುಗಡೆ ಮಾಡಲಾಗಿತ್ತು.ಈ ಕಾರ್ಯಕ್ರಮ ಯಾವಾಗ ಪ್ರಾರಂಭವಾಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿತ್ತು. ಇದಕ್ಕೆ ನಟ ಸುದೀಪ್ ತೆರೆ ಎಳೆದಿದ್ದಾರೆ. ಸೆಪ್ಟೆಂಬರ್.28ಕ್ಕೆ ಪ್ರಾರಂಭ ಆಗಲಿದೆ ಎಂಬುದಾಗಿ ಘೋಷಣೆ ಮಾಡಿದ್ದಾರೆ.
ಇಂದು ಮೈಸೂರಲ್ಲಿ ನಿರ್ಮಾಪಕ, ಉದ್ಯಮಿ, ರಾಜಕಾರಣಿ ಸಂದೇಶ್ ನಾಗರಾಜ್ ಅವರ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ನಟ ಸುದೀಪ್ ಭಾಗಿಯಾಗಿದ್ದರು.
ಈ ವೇಳೆ ಅವರು ಕನ್ನಡದ ಬಿಗ್ ಬಾಸ್ ಸೀಸನ್ 12 ಯಾವಾಗ ಪ್ರಾರಂಭವಗಲಿದೆ ಎನ್ನುವ ಮಾಹಿತಿಯನ್ನು ರಿವೀಲ್ ಮಾಡಿದರು.
ಸೆಪ್ಟೆಂಬರ್.28ಕ್ಕೆ ಕಿರುತೆರೆಯ ಖ್ಯಾತ ಬಿಗ್ ಬಾಸ್ ಸೀಸನ್ 12 ಆರಂಭಗೊಳ್ಳಲಿದೆ. ಈ ಬಾರಿಯೂ ಅವರೇ ನಿರೂಪಣೆ ಮಾಡಲಿದ್ದಾರೆ ಎಂಬುದಾಗಿ ಹೇಳಿದ್ದಾರೆ.




