ಹುಬ್ಬಳ್ಳಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ ಬಿ ಕೃಷ್ಣಪ್ಪ ಸ್ಥಾಪಿತ) ಪುರೋಹಿತ ನಗರ್ ತೇಜಸ್ವಿ ನಗರ್ ಹಾಗೂ ರೋಟರಿ ಬ್ಲಡ್ ಬ್ಯಾಂಕ್ ಸಂಯೋಗದೊಂದಿಗೆ ದಿನಾಂಕ 30.08.2025 ರಂದು
ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳಿಂದ ರಕ್ತಧಾನ್ ಶಿಬಿರ ಏರ್ಪಡಿಸಲಾಯಿತು.
ಶಿಬಿರದ ಉದ್ಘಾಟಕರಾಗಿ ಆಗಮಿಸಿದ ವಿದ್ಯಾಗಿರಿ ಪೊಲೀಸ್ ಠಾಣೆಯ ಸಿಪಿಐ ಸಂಗಮೇಶ ಡಿಂಡಿಗನಾಳ್ ಅವರು ಕಾರ್ಯಕ್ರಮ ಉದ್ಗಾಟಿಸಿ ಸಂಘದ ಇಂತಹ ಸಮಾಜಮುಖಿ ಕಾರ್ಯವನ್ನು ಪೊಲೀಸ್ ಇಲಾಖೆ ಸದಾ ಬೆಂಬಲಿಸುವದಾಗಿ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆ ಡಿ ಎಸ್ ಎಸ್ ಧಾರವಾಡ, ರಾಜ್ಯ ಸಂಘಟನಾ ಸಂಚಾಲಕರಾದ ಶ್ರೀ ಮರೀಶ್ ಎಸ್ ನಾಗಣ್ಣವರ, ರಕ್ತದಾನ ಶ್ರೇಷ್ಟ ದಾನವಾಗಿದ್ದು ರಕ್ತವನ್ನು ಬಡ ರೋಗಿಗಳ ಪ್ರಾಣವನ್ನು ಉಳಿಸುವಲ್ಲಿ ಮಹತ್ವ ಪಡೆಯುತ್ತದೆ ಅದಕ್ಕಾಗಿ ಯುವಕರು ರಕ್ತದಾನವನ್ನು ಮಾಡಿ ಜೀವ ಉಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಆಡಳಿತ ವೈದ್ಯಾಧಿಕಾರಿ ಡಾ ರವಿ ಸೋಮಣ್ಣವರ ಮಾತನಾಡಿ ಮುಂದಿನ ದಿನಗಳಲ್ಲಿ ಪುರೋಹಿತ್ ನಗರದ ಯುವಕರು ಇಂಥಹ ಸಮಾಜಮುಖಿ ಕಾರ್ಯದಲ್ಲಿ ಹೆಚ್ಛು ತೊಡಗಿಸಿಕೊಳ್ಳುವರು ಎಂದು ಭರವಸೆ ನೀಡಿದರು. ರೋಟರಿ ಕ್ಲಬ್ ಸಿಬ್ಬಂಧಿ ಸ್ಟಿಕಾಂತ್ ಆಪ್ಟ ಉಪಸ್ಥಿತರಿದ್ದರು. ಅಭಿನಂದನ ಗುರುರಾಜ ಅಧ್ಯಕ್ಷತೆ ವಹಿಸಿದ್ದರು.
ಒಟ್ಟು 29 ದಲಿತ ನಾಯಕರು / ಸದಸ್ಯರು ರಕ್ತದಾನ ಮಾಡಿದರು. ಧಾರವಾಡದ ದಲಿತ್ ನಾಯಕರಾದ
ಪ್ರಕಾಶ್ ಅರಟ್ಟಿ ಆನಂದ್ ಬೆಳಗಲಿ ಹನುಮಂತ್ ಸಿಂಡೋಗಿ ರಾಕೇಶ್ ಚಲಾವದಿ ಚೇತನ್ ಕಡೂರ್
ವಿನೋದ್ ಯರಗುಂಟಿ ಪುಂಡಲೀಕ್ ಪೂಜಾರ್ ಅರ್ಜುನ್ ಮುಂದಿನಮಣಿ ಕುಮಾರ್ ಬೂದಿಹಾಳ್
ಮಣಿಕಂಠ ಪೂಜಾರ್ ರವಿ ನಾಯ್ಕರ್ ಚೇತನ್ ಮಾದರ ಮಾರುತಿ ಶಿರೋಳ್ ಅನೇಕರು ಉಪಸ್ಥಿತರಿದ್ದರು.
ವರದಿ : ನಿತೀಶಗೌಡ ತಡಸ ಪಾಟೀಲ್




