Ad imageAd image

ಅಡಕಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಸತಿ ಪಾಲಕರನ್ನು ಹಾಗೂ ಪ್ರಾಚಾರ್ಯರರನ್ನು ವಜಾಗೊಳಿಸುವಂತೆ ಕರವೇ ಮನವಿ

Bharath Vaibhav
ಅಡಕಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಸತಿ ಪಾಲಕರನ್ನು ಹಾಗೂ ಪ್ರಾಚಾರ್ಯರರನ್ನು ವಜಾಗೊಳಿಸುವಂತೆ ಕರವೇ ಮನವಿ
WhatsApp Group Join Now
Telegram Group Join Now

ಸೇಡಂ:ತಾಲೂಕಿನ ಅಡಕಿ ಗ್ರಾಮದ ಹೊರವಲಯದಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾರಂಭದಿಂದಲೂ ದಿನದಿಂದ ದಿನಕ್ಕೆ ಯಾವುದೋ ಒಂದು ತೊಂದರೆಯಲ್ಲಿ ವಿದ್ಯಾರ್ಥಿಗಳು ಶಾಲಾ ಕಲಿಯುವಂತಾಗಿದೆ.

ದಿನನಿತ್ಯ ಊಟದ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಮಟ್ಟ ಹಾಕಿದ್ದು ಅಲ್ಲದೆ, ಊಟದಲ್ಲಿ ಹುಳುಗಳು ಕಾಣಿಸುತ್ತಿವೆ, ಜುಲೈ ತಿಂಗಳ ೨೦ನೇ ದಿನಾಂಕದಂದು ವಿದ್ಯಾರ್ಥಿಗಳ ಅನ್ನದಲ್ಲಿ ಸಾಕಷ್ಟು ಹುಳಗಳು ಕಾಣಿಸಿರುತ್ತವೆ. ಇದಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಶಾಲೆಯ ಮುಖ್ಯದ್ವಾರದ ಎದುರುಗಡೆ ಊಟ ಮಾಡದೇ ಉಪವಾಸ ಕುಂತಿರುವರು ತಾಲೂಕ ಮಟ್ಟದ ಅಧಿಕಾರಿಗಳು ಬಂದು ಮಕ್ಕಳಿಗೆ ಕೆಳದಿರುವುದು ವಿಷಾದನೀಯ ಸಂಗತಿ. ಇದು ಅಲ್ಲದೆ ಮಕ್ಕಳಿಗೆ ಶೌಚಾಲಯ ವ್ಯವಸ್ಥೆ, ನೀರಿನ ವ್ಯವಸ್ಥೆ, ಆ ಶಾಲೆಯು ತುಂಬಾ ಕಸದ ರಾಶಿಯಂತೆ ಕಾಣುತ್ತದೆ, ಆದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ, ಏಕೆಂದರೆ ಇದು ಸರಕಾರಿ ಶಾಲೆ, ಬಡವರ ಮಕ್ಕಳು, ಕೂಲಿಕಾರ್ಮಿಕರ, ರೈತರ ಮಕ್ಕಳು ತಮ್ಮ ತಂದೆ ತಾಯಿರನ್ನು ಬಿಟ್ಟು ಇಲ್ಲಿ ಅನಾಥ ಮಕ್ಕಳಂತೆ ವಿದ್ಯಾಬ್ಯಾಸ ಮಾಡುತ್ತಾರೆ, ನಾವು ಸಹ ಬೇಟಿ ನೀಡಿ ವಿದ್ಯಾರ್ಥಿಗಳ ಕುಂದುಕೊರತೆಗಳು ಅಳಿಸಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಏನು ಪ್ರಯೋಜನ ಆಗಿಲ್ಲ. ಮತ್ತು ದಿನನಿತ್ಯ ಆಗಾಗ ಅನ್ನದಲ್ಲಿ ಹುಳುಗಳು ಬರುತ್ತಲೇ ಇವೆ, ಇದಕ್ಕೆ ನೇರ ಹೊಣೆ ವಸತಿ ಶಾಲೆಯ ವಸತಿ ಪಾಲಕರು ಮತ್ತು ಪ್ರಾಚಾರ್ಯರ ನಿರ್ಲಕ್ಷ್ಯ ಆದ್ದರಿಂದ ಇವರನ್ನು ಎಂಟು ದಿನಗಳೊಳಗೆ ವಜಾಗೊಳಿಸಿ ಬೇರೊಬ್ಬರನ್ನು ನೇಮಕ ಮಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ನಿರ್ಮಿಸಬೇಕು. ಇಲ್ಲವಾದಲ್ಲಿ ಅಡಕಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ನಿಲಯದ ಮುಖ್ಯ ದ್ವಾರದ ಎದುರುಗಡೆ ವಿದ್ಯಾರ್ಥಿಗಳ ಪರವಾಗಿ ಉಪವಾಸ ಸತ್ಯಾಗ್ರಹದ ಹೋರಾಟ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ಅವರು ಮಕ್ಕಳಿಗೆ ಉತ್ತಮ ಗುಣಮಟ್ಟದ ಊಟ ಮತ್ತು ಆರೋಗ್ಯ ನೀಡಬೇಕು ಎಂದು ಊಟದ ತಟ್ಟೆ ಹಿಡಿದು ಭಿಕ್ಷೆ ಬೇಡುವ ಮೂಲಕ ತಾಲೂಕ ತಹಸೀಲ್ದಾರ ಶ್ರೇಯಾಂಕ ಧನುಶ್ರಿ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಮಹೇಶ್ ಪಾಟೀಲ್, ಶ್ರೀನಿವಾಸ್ ರೆಡ್ಡಿ, ದೇವುಕುಮರ್, ಭೀಮಯ್ಯ ಗುತ್ತೇದಾರ್, ಚಂದ್ರಕಾಂತ್ ಪೂಜಾರಿ, ಗುಂಡಪ್ಪ ಪೂಜಾರಿ, ಮಹೇಶ್ ರೆಡ್ಡಿ, ರಾಘವೇಂದ್ರ, ಚಂದ್ರಶೇಖರ್ ಮಡಿವಾಳ, ಅನಿಲ್, ರವಿ ಸಿಂಗ್, ಶಿವಕುಮಾರ್ ಸಿಂದನಮಡು, ನಾಗಪ್ಪ, ಪ್ರಜ್ವಲ್, ಸುಭಾಷ್ ಚಂದ್ರ, ರವಿ ಮದರಿ, ಭಗವಂತ ಇಮಾಡಪುರ, ಆನಂದ ಸಿಂದನಮಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!