ಧರ್ಮ ಸ್ಥಳ ಧರ್ಮಾಧಿಕಾರಿ ವಿರುದ್ಧ ಅಪಪ್ರಚಾರ
ಪಾವಗಡ : ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕು, ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಹಾಗೂ ಧರ್ಮಸ್ಥಳ ಭಕ್ತ ಅಭಿಮಾನಿಗಳಾದ ಮಹಿಳೆಯರು ಸಾವಿರಾರು ಭಕ್ತಾದಿಗಳು ಮತ್ತು ಬಜರಂಗದಳ. ರೈತ ಸಂಘಗಳು ಪಾವಗಡ ತಾಲೂಕಿನಲ್ಲಿರುವ ಪ್ರಗತಿಪರ ಸಂಘಟನೆಗಳು ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ರಲು ಒಳಸಂಚು ನಡೆಯುತ್ತಿರುವವರ ವಿರುದ್ಧ ಕ್ರಮ ಕೈ ಗೊಳ್ಳಲು ದಿನಾಂಕ, 01/09/25 ಸೋಮವಾರರಂದು ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಹಮ್ಮಿಕೊಳ್ಳಲಾಗಿತ್ತು.
ಇದೇ ವೇಳೆಯಲ್ಲಿ. ಮಾಜಿ ಶಾಸಕ ಕೆಎಂ ತಿಮ್ಮರಾಯಪ್ಪ ಮಾತನಾಡಿ. ಕೋಟ್ಯಾಂತರ ಹಿಂದುಗಳ ಪವಿತ್ರ ಕ್ಷೇತ್ರ ಶ್ರೀ ಮಂಜೂರಾಧನ ಪುಣ್ಯ ಸನ್ನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ರಲು ಒಳಸಂಚು ನಡೆಯುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಹೇಳಿ. ರಾಜ್ಯಾದ್ಯಂತ ನಮ್ಮ ಪಕ್ಷದ ಮುಖಂಡರುಗಳು ವತಿಯಿಂದ ಸಾವಿರಾರು ಸಂಖ್ಯೆಯಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ್. ಮತ್ತು ಅಣ್ಣಪ್ಪಸ್ವಾಮಿಗೆ ದರ್ಶನ ಪಡೆದು ಮತ್ತು ಪೂಜೆ ಮಾಡಿಸಿ ಪರಮಪೂಜ್ಯ ವೀರೇಂದ್ರ ಹೆಗಡೆಯವರನ್ನು ಸನ್ಮಾನ ಮಾಡಿ ಮತ್ತು ಧೈರ್ಯ ತುಂಬಿ ನಿಮ್ಮ ಬೆಂಬಲಕ್ಕೆ ನಮ್ಮ ಇಡೀ ಜೆಡಿಎಸ್ ಪಕ್ಷ ಇರುತ್ತದೆ ಎಂದು ಹೇಳಿದ್ದೇವೆ. ಎಂದು ತಿಳಿಸಿರುತ್ತಾರೆ.
ಪಾವಗಡ ಪಟ್ಟಣದಲ್ಲಿ ಇರುವ ಗುರುಭವನ್ ಮೈದಾನದಿಂದ ಸೋಮವಾರ ಬೆಳಿಗ್ಗೆ 11:30ಕ್ಕೆ ಸಮಯದಲ್ಲಿ ಧರ್ಮಸ್ಥಳ ಭಕ್ತ ಅಭಿಮಾನಿ ಗಳಿಂದ ಶನೈಶ್ವರ ದೇವಸ್ಥಾನ ವೃತ್ತದವರಗೆ ಜಾತ ಮೆರವಣಿಗೆ ನಡೆಸಿ ತಹಶೀಲ್ದಾರ್ ಕಚೇರಿಯ ಮುಂದೆ ಇರುವ ಬಳ್ಳಾರಿ ಮಾರ್ಗದರ್ಶನ ಇರುವ ರಸ್ತೆ ತಡೆದು ಪ್ರತಿಭಟನೆ ನಡೆಸಿ ತಹಸಿಲ್ದಾರ್ ಕಚೇರಿಗೆ ಧರ್ಮಸ್ಥಳ ಭಕ್ತಾದಿಗಳು ಬೇಟೆ ನೀಡಿ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕಳಂಕ ರಲು ಒಳಸಂಚು ನಡೆಯುತ್ತಿರುವವರ ವಿರುದ್ಧ ಪ್ರತಿಭಟನೆ ನಡೆಸಿ ತಹಶೀಲ್ದಾರ್ ವರದರಾಜ್ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ, ಹಿರಿಯ ಮುಖಂಡ ಡಾ. ವೆಂಕಟರಾಮಯ್ಯ, ಆರ್ ಸಿ ಅಂಜನಪ್ಪ. ಜೆಡಿಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಎನ್ ಎ ಈರಣ್ಣ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ತಾಲೂಕು ಯೋಜನಾ ಅಧಿಕಾರಿ ಮಹೇಶ್,ಬಿಜೆಪಿ ರವಿ, ಗಂಗಿನೆನಿ ಮನು ಮಹೇಶ್. ದೇವರಾಜ್, ಅಲ್ಕುoದಿರಾಜ್, ಕಾವಳಗೆರೆ ರಾಮಾಂಜಿ, ನಾಗರಾಜ್,ಶೇಖರ್ ಬಾಬು,ರೂಪ್ಪಾ ಗಿರೇಶ್. ಭಜರಂಗದಳ ಸುಮನ್, ರಾಕೇಶ್,ರವಿ ಸೇರಿದಂತೆ ತಾಲೂಕಿನ ಮೂಲೆ ಮೂಲೆಗಳಿಂದ ಧರ್ಮಸ್ಥಳ ಮಹಿಳಾ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಸೇರಿದಂತೆ ಸಾವಿರಾರು ಮಂದಿ ಪದಾಧಿಕಾರಿಗಳು ಹಾಜರಿದ್ದರು.
ವರದಿ : ಶಿವಾನಂದ




