————————————–ಬೋರಗಾವ ದಲ್ಲಿ 3 ರಸ್ತೆ ಕಾಮಗಾರಿಗಾಗಿ 7 ಕೋಟಿ ರೂಪಾಯಿ ಮಂಜೂರು
————————————– ಕಾಮಗಾರಿಗೆ ಸಂಸದೆ ಪ್ರಿಯಾಂಕ ಜಾರಕಿಹೊಳಿ ಚಾಲನೆ
ನಿಪ್ಪಾಣಿ: ಸಚಿವರಾದ ಸತೀಶ್ ಜಾರಕಿಹೊಳಿಯವರ ವಿಶೇಷ ಪ್ರಯತ್ನದಿಂದ ತಮ್ಮ ಸಚಿವರ ಅನುದಾನದಡಿ ನಿಪ್ಪಾಣಿ ತಾಲೂಕಿನ ಬೋರಗಾವ ಸರ್ಕಲ್ ದಿಂದ ಬೋರಗಾವ ವಾಡಿ ಕ್ರಾಸ್ ವರೆಗೆ, ಬೇಡಕಿಹಾಳ ಶಾಂತಿನಗರ ಸರ್ಕಲ್ ದಿಂದ ನೇಜ ಸರ್ಕಲ್, ಹಾಗೂ ಬೇಡಕಿಹಾಳ-ಗಳತಗಾ ರಸ್ತೆಯ 2ಕಿ . ಮೀ ರಸ್ತೆ ಕಾಮಗಾರಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಯವರ ಸ್ವಂತ ಅನುದಾನದಲ್ಲಿ 7ಕೋಟಿ ರೂಪಾಯಿಗಳ ಕಾಮಗಾರಿಗೆ ಮಂಜೂರಿ ದೊರೆತಿದ್ದು ಮಂಗಳವಾರ ಸಂಸದೆ ಪ್ರಿಯಾಂಕ ಜಾರಕಿಹೊಳಿ ಕಾಮಗಾರಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಿಪ್ಪಾಣಿ ತಾಲೂಕಿನ ಗಡಿ ಭಾಗದಲ್ಲಿಯ ರಸ್ತೆಗಳು ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದ್ದರಿಂದ ಈಗಾಗಲೇ 7 ಕೋಟಿ ರೂಪಾಯಿಗಳ ಕಾಮಗಾರಿಗೆ ಚಾಲನೆ ನೀಡಲಾಗಿದ್ದು ಬರುವ ದಿನಗಳಲ್ಲಿ ನಿಪ್ಪಾಣಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ತಾವು ಬದ್ಧರಿರುವುದಾಗಿ ತಿಳಿಸಿ ಗುತ್ತಿಗೆದಾರಿಗೆ ದರ್ಜೆಯುತ ರಸ್ತೆನಿರ್ಮಿಸಲು ಖಡಕ್ ಎಚ್ಚರಿಕೆ ನೀಡಿದರು. ಪ್ರಾರಂಭ ದಲ್ಲಿ ಬೋರಗಾವ ಪಟ್ಟಣದ ಸರ್ಕಲ್ ನಲ್ಲಿ ಕಾಮಗಾರಿಗೆ ಚಾಲನೆ ನೀಡಿದರು.
ತದನಂತರ ಬೇಡಕಿಹಾಳ.ಕ್ರಾಸ್ ದಿಂದ ನೇಜ ಕ್ರಾಸ್,ಹಾಗೂ ಬೇಡಕಿಹಾಳ -ಗಳತಗಾ ರಸ್ತೆಯಲ್ಲಿಯ 2 ಕಿ. ಮೀ.ರಸ್ತೆ ಕಾಮಗಾರಿಗೆ ಆಯಾ ಗ್ರಾಮದ ಗಣ್ಯರಿಂದ ಶ್ರೀಫಲ್ ಅರ್ಪಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಬೋರಗಾವ ವೃತ್ ಸುಧಾರಣೆಗೆ, ಬೇಡಕಿಹಾಳದ ದೂಧಗಂಗಾ ನದಿ ಸೇತುವೆ ನಿರ್ಮಾಣ, ಸದಲಗಾ ರುದ್ರಭೂಮಿ ದುರುಸ್ತಿ ಕಾಮಗಾರಿ ಗಾಗಿ ಸಂಸದರಿಗೆ ಮನವಿ ಪತ್ರ ನೀಡಲಾಯಿತು.
ಈ ಸಂಧರ್ಭದಲ್ಲಿ ಬುಡಾ ಅಧ್ಯಕ್ಷ ಲಕ್ಷ್ಮಣ್ ರಾವ್ ಚಿಂಗಳೇ, ಯುವ ನಾಯಕ ಉತ್ತಮ ಪಾಟೀಲ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಅಣ್ಣಾ ಸಾಹೇಬ್ ಹವಲೆ, ಮುಖ್ಯ ಅಧಿಕಾರಿ ತೋಡ್ಕರ್ ಸಾಹೇಬ್, ರಾಜು ವಡ್ಡರ್,ಪಂಕಜ್ ಪಾಟೀಲ್, ಸುಪ್ರಿಯ ಪಾಟೀಲ್ ಪ್ರಮೋದ್ ಪಾಟೀಲ್ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವಾನಂದ ಬಿಜಲೆ, ಶಂಕರ ಪಾಟೀಲ್,ಅಶೋಕ ಅರಗೆ, ಪಿಂಟು ಅರಗೆ, ಅಝರುದ್ದಿನ ಶೇಖಜಿ,ಬೋರಗಾವ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಬಹು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ವರದಿ: ಮಹಾವೀರ ಚಿಂಚಣೆ




