ರಾಯಚೂರು :ರಸ ಗೊಬ್ಬರ ಅಂಗಡಿ ಮಾಲೀಕರು ರಸ ಗೊಬ್ಬರದೊಂದಿಗೆ ಇನ್ನೊಂದು ಗೊಬ್ಬರ ಖರೀದಿ ನಿಯಮ ಪಾಲಿಸದಿದ್ದರೆ ಅಂಗಡಿಗಳ ಲೈಸೆನ್ಸ್ ರದ್ದು ಮಾಡಲು ಶಾಸಕ ಬಸನಗೌಡ ದದ್ದಲ್ ತಾಕಿತ್ ಆರ್ ಎಪಿಎಂಸಿ ಸೇರಿ ಇತರೆ ಸಹಕಾರ ಸಂಘಗಳಿಂದ ರೈತರಿಗೆ ವಿತರಣೆ ಮಾಡುವ ರಸಗೊಬ್ಬರಗಳನ್ನು ಒಂದು ಕಂಪನಿಯ ರಸಗೊಬ್ಬರ ಖರೀದಿ ಮಾಡಿದರೆ ಮತ್ತೊಂದು ರಸಗೊಬ್ಬರ ಕಡ್ಡಾಯವಾಗಿ ಖರೀದಿ ಮಾಡಬೇಕೆಂಬ ನಿಯಮ ಇಲ್ಲದಿದ್ದರೂ ಖರೀದಿಸುವಂತೆ ರೈತರಿಗೆ ಹೇಳುತ್ತಿದ್ದು ರೈತರಿಗೆ ಹೊರೆಯಾಗುತ್ತಿದೆ ಇಂತಹ ನಿಯಮ ಮಾಡುತ್ತಿರುವವರಿಗೆ ನೋಟಿಸ್ ನೀಡಿ ಲೈಸೆನ್ಸ್ ರದ್ದು ಮಾಡಬೇಕು ಇಲ್ಲದಿದ್ದರೆ ಕೃಷಿ ಇಲಾಖೆ ಅಧಿಕಾರಿಯನ್ನೇ ಅಮಾನತ್ತು ಮಾಡಲಾಗುತ್ತದೆ ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲೂಕ ಪಂಚಾಯತ್ ಸಗಂಬಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ತಾಲೂಕಿನಲ್ಲಿರುವ ಆರ್ ಎಪಿಎಂಸಿ ಮತ್ತು ಇತರೆ ಸಹಕಾರ ಸಂಘಗಳಿಂದ ಗೊಬ್ಬರ ವಿತರಣೆ ಮಾಡುತ್ತಿದ್ದು ರೈತರು ರಸ ಗೊಬ್ಬರ ಖರೀದಿ ಮಾಡುವ ವೇಳೆ ಒಂದು ಕಂಪನಿಯ ರಸಗೊಬ್ಬರ ಖರೀದಿ ಮಾಡಿದರೆ ಅದಕ್ಕೆ ಮತ್ತೊಂದು ಬೇರೆ ರಸಗೊಬ್ಬರ ಅಟ್ಯಾಚ್ ಮಾಡಿ ಖರೀದಿ ಮಾಡಬೇಕೆಂಬ ನಿಯಮವಿಲ್ಲ ಆದರೂ ರೈತರಿಗೆ ಕಡ್ಡಾಯವಾಗಿ ಪಡೆಯಬೇಕೆಂಬುವ ನಿಯಮವನ್ನು ಹಾಕುತ್ತಿರುವ ದೂರುಗಳು ಬಂದಿವೆ ರೈತರಿಗೆ ಬೇಕಿಲ್ಲದಿದ್ದರೂ ಅನಿವಾರ್ಯವಾಗಿ ಖರೀದಿ ಮಾಡ್ತಾರೆ ಇದರಿಂದ ರೈತರಿಗೆ ಹೊರೆಯಾಗುತ್ತಿದೆ ಎಂದು ಕೃಷಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ದೂರುಗಳನ್ನು ಆಧರಿಸಿ ಅಂತಹ ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿಗಳ ಪರವನಿಗೆ ರದ್ದುಪಡಿಸಬೇಕು ರೈತರಿಂದ ನನಗೆ ಮೌಖಿಕ ದೂರಗಳು ಬಂದಿರುತ್ತವೆ ಪತ್ರದ ಮೂಲಕ ದೂರು ಪಡೆದುಕೊಂಡು ಕ್ರಮ ವಹಿಸಬೇಕು ರೈತರು ನೀಡಿದ ದೂರಿನ ಮೇರೆಗೆ ಕ್ರಮ ವಹಿಸದಿದ್ದರೆ ಕೃಷಿ ಇಲಾಖೆ ಅಧಿಕಾರಿಯನ್ನು ಅಮಾನತ್ತು ಮಾಡಲಾಗುವುದು ಎಂದು ಕೃಷಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ರೈತರಿಗೆ ಕನಿಷ್ಠ ಐದು ಚೀಲ ರಸಗೊಬ್ಬರ ನೀಡಬೇಕು ಎರಡು ಚೀಲ ನೀಡಿದರೆ ಸಾಕೋಗದಿಲ್ಲ 5 ಎಕರೆ ಇರುವ ಸಾಕಷ್ಟು ರೈತರು ಆರ್ ಎಪಿಎಂಸಿ ಗಳಿಗೆ ಬರುತ್ತಾರೆ ದೊಡ್ಡ ರೈತರು ಹೊರಗಡೆ ಖರೀದಿ ಮಾಡ್ತಾರೆ ಸಣ್ಣ ರೈತರಿಗೆ ಮೊದಲು ಆದ್ಯತೆ ನೀಡಬೇಕು ತಾಲೂಕಿನ ರೈತರಿಗೆ ರಸಗೊಬ್ಬರ ಕೊರತೆಯಾಗದಂತೆ ದಾಸ್ತಾನು ಮಾಡಿಕೊಳ್ಳಬೇಕು ತ್ರೈಮಾಸಿಕ ಕೇಡಿಕ ಸಭೆಯಲ್ಲಿ ಕೃಷಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು ಈ ಸಂದರ್ಭದಲ್ಲಿ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಗಾರಲದಿನ್ನಿ ವೀರನಗೌಡ




