ಚಿಕ್ಕೋಡಿ : ಇಲ್ಲಿನ ತಾಯಿ-ಮಗು ಆಸ್ಪತ್ರೆಗೆ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ದಿಡೀರನೆ ಭೇಟ್ಟಿ ನೀಡಿ ಪರಿಶೀಲನೆ ನಡೆಸಿದರು.
ಆಸ್ಪತ್ರೆಯಲ್ಲಿನ ಬಾಣಂತಿ ಹಾಗೂ ಶಸ್ತ್ರಚಿಕಿತ್ಸೆ,ಸ್ಕ್ಯಾನಿಂಗ ಕೇಂದ್ರ,ರಕ್ತ ತಪಾಸನಾ ಹಾಗೂ ಇತರೆ ಕೇಂದ್ರಗಳಿಗೆ ಭೇಟ್ಟಿ ನೀಡಿದರು.ಸಾರ್ವಜನಿಕರಿಂದ ಸಾಕಷ್ಟು ಮಾಹಿತಿ ಪಡೆದುಕೊಂಡರು.ತಾಯಿ-ಮಗು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಬಾಣಂತಿಯರಿಂದ ಅಕ್ರಮವಾಗಿ ಹಣ ಪಡೆದುಕೊಳ್ಳುತ್ತಾರೆ ಹಾಗೂ ಸ್ವಚತೆ ಇಲ್ಲ.ವೈದ್ಯರು ತಾಯಿ-ಮಗು ಸ್ತ್ರೀರೋಗ ವೈದ್ಯರು ಆಸ್ಪತ್ರೆಯಲ್ಲಿ ಇರುವದಿಲ್ಲ ಮತ್ತು ಗರ್ಭಿಣಿಯರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸುತ್ತಾರೆ ಎಂಬ ದೂರುಗಳು ಕೇಳಿ ಬಂದಿವೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಕುರಿತು ಡಿಎಚ್ ಓ ಅವರ ಜೊತೆ ಮಾತನಾಡಲಾಗುವದು ಎಂದು ಭರವಸೆ ನೀಡಿದರು.
ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ತಜ್ಞರು ಇಲ್ಲಾ ಹಾಗೂ ರಕ್ತ ತಪಾಸಣಾ ಮಾಡಲು ತಜ್ಞರು ಇಲ್ಲ ಎಂಬುದರ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲಾಗುವದು ಎಂದರು.ಈ ಆಸ್ಪತ್ರೆಗೆ ಗರ್ಭಿಣಿಯರಿಗೆ ತೊಂದರೆ ಆಗುತ್ತಿರುವದನ್ನು ಮನಗಂಡು ನಾನು ತಾಯಿ-ಮಗು ಆಸ್ಪತ್ರೆಗೆ ಆಂಬುಲೇನ್ಸ ನೀಡಿರುವೆ ಅದರ ಉಪಯೋಗ ಮಾಡಿಕೊಳ್ಳುವಂತೆ ಕರೆ ನೀಡಿದರು.ಆಸ್ಪತ್ರೆ ಸುತ್ತ ಮುತ್ತಲು ಬೀದಿ ದೀಪಗಳನ್ನು ಅಳವಡಿಸಬೇಕು.ಅಲ್ಲದೆ ಆಸ್ಪತ್ರೆಗೆ ಭದ್ರತಾ ಸಿಬ್ಬಂದಿಯನ್ನು ನೀಡುವಂತೆ ಮನವಿ ಮಾಡಿದರು.
ಅದಕ್ಕೆ ನೀಡುವದಾಗಿ ಭರವಸೆ ನೀಡಿದರು.ತಾಯಿ-ಮಗು ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ವೈದ್ಯರು ಇಲ್ಲದೆ ಇರುವದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಅದಕ್ಕಾಗಿ ವೈದ್ಯರನ್ನು ನೀಡುವದಾಗಿ ಭರವಸೆ ನೀಡಿದರು.ಸ್ತ್ರೀರೋಗ ತಜ್ಞರಾದ ಡಾ.ಜಯಲಕ್ಷ್ಮೀ ಮುಸಾಳೆ ಅವರು ಸಂಸದರು ಬಂದಾಗ ಆಸ್ಪತ್ರೆಯಲ್ಲಿ ಇರಲಿಲ್ಲ.ತದ ನಂತರ ಆಸ್ಪತ್ರೆಗೆ ಆಗಮಿಸಿ ತಾಯಿ-ಮಗು ಆಸ್ಪತ್ರೆ ಬಗ್ಗೆ ಮಾಹಿತಿ ನೀಡಿದರು.
ವರದಿ : ರಾಜು ಮುಂಡೆ




