ಅಥಣಿ : ಆಹಾರ ಪದ್ಧತಿಯನ್ನು ಬದಲಾವಣೆ ಮಾಡಿಕೊಂಡಾಗ ಮಾತ್ರ ಒಳ್ಳೆಯ ಆರೋಗ್ಯವನ್ನು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಉದ್ಘಾಟಕರಾಗಿ ನಾಮದೇವ ಕಾಮಣ್ಣ ಸಾಲಮಂಬಪಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ತಾಲೂಕ ಅಧ್ಯಕ್ಷರು ಅಥಣಿ ಅವರು ಹೇಳಿದರು.
ಅವರು ಸ್ಥಳೀಯ ಅಥಣಿ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಹಮ್ಮಿಕೊಂಡ ತಾಲೂಕು ಕಾನೂನು ಸೇವಾ ಸಮೀತಿ, ಆಥಣಿ, ವಕೀಲರ ಸಂಘ, ಅಥಣಿ. ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಅಥಣಿ.ಆರೋಗ್ಯ ಇಲಾಖೆ, ಅಥಣಿ, ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಪೌಷ್ಟಿಕಾಂಶ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು ಮಕ್ಕಳು ಪೌಷ್ಟಿಕಾಂಶ ಹಾರವನ್ನು ಸೇವನೆ ಮಾಡಿದಾಗ ಒಳ್ಳೆಯ ಆರೋಗ್ಯ ಮಾನಸಿಕ ನೆಮ್ಮದಿ ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.
ನಂತರ ಓಂಕಾರಮೂರ್ತಿ ಎಚ್ ಪ್ರಧಾನ ಸಿವಿಲ್ ನ್ಯಾಯಧೀಶರು ಹಾಗೂ ಜೆ ಎಮ್ ಎಫ್ ಸಿ, ಅಧನೆ.
ಮತ್ತು ಸದಸ್ಯಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮೀತಿ, ಅಥಣಿ ಅವರು ಮಾತನಾಡಿ ಮಕ್ಕಳಿಗೆ ಹೆಚ್ಚು ಕರದಂತ ಪದಾರ್ಥಗಳಿಂದ ದೂರವಿರಲು ಪ್ರಯತ್ನಿಸಿ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಿ ರೋಗ ರುಜುನಗಳಿಗೆ ಬಲಿಯಾಗದೆ ಮಕ್ಕಳಿಗೆ ಉತ್ತಮವಾದ ಪೌಷ್ಟಿಕ ಆಹಾರ ಹೆಚ್ಚು ಹೆಚ್ಚಾಗಿ ನೀಡಬೇಕು. ಪ್ರತಿಯೊಬ್ಬರು ಒಳ್ಳೆಯ ಆಹಾರ ಸೇವನೆ ಮಾಡಿದಾಗ ಇದರಿಂದ ಮಕ್ಕಳ ಬೆಳವಣಿಗೆ ಹಾಗೂ ಮಾನಸಿಕ ನೆಮ್ಮದಿ ಸದೃಢವಾಗಿ ಬೆಳೆಯಲಿಕ್ಕೆ ಸಹಕಾರಿ ಆಗುತ್ತದೆ ಎಂದರು.
ಉಪನ್ಯಾಸಕರಾದ ಮುರುಗೇಶ ಅವಟಿ, ಮಕ್ಕಳ ತಜ್ಞ ವೈದ್ಯರು, ಆರೋಗ್ಯ ಇಲಾಖೆ, ಆಥಣಿ ಅವರು ಮಾತನಾಡಿದರು ಮಕ್ಕಳು ಬೆಳವಣಿಗೆ ತಾಯಿಯಂದಿರು ಎದೆ ಹಾಲು ಉಣಿಸುವುದನ್ನು ನಿಲ್ಲಿಸಬಾರದು ಮಕ್ಕಳ ಬೆಳೆದಂತೆ ಅವರ ವಯಸ್ಸಿನ ಆಧಾರದ ಮೇಲೆ ಆಹಾರ ಪದ್ಧತಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು.
ಮಕ್ಕಳಿಗೆ ಉಣಿಸುವಾಗ ಮೊಬೈಲ್ ಕೈಯಲ್ಲಿ ಕೊಡಬೇಡಿ, ಇದರಿಂದ ದೂರವಿಡಿ ಎಂದರು ಮಕ್ಕಳಿಗೆ ಒಳ್ಳೆ ಪೌಷ್ಟಿಕ ಆಹಾರ ನೀಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಮ್ಮ ಅಂಗನವಾಡಿ ಕೇಂದ್ರದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿದ 15 ಜನಕ್ಕೆ ಸನ್ಮಾನ ಕಾರ್ಯಕ್ರಮ ಜರಗಿತು ನಂತರ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ಹಾಗೂ ಅನ್ನ ಪಾಶನ ಮತ್ತು ಮಕ್ಕಳ ಹುಟ್ಟು ಹಬವನ್ನು ಆಚರಣೆ ಮಾಡಿದರು.
ಈ ಸಂದರ್ಭದಲ್ಲಿ ಬಸಪ್ಪ ಕಾಂಬಳೆ, ಸಹಾಯಕ ಸರ್ಕಾರಿ ಅಭಿಯೋಜಕರು, ಅಥಣಿ. ಎ ಎ ಹುದ್ದಾರ. ಅಧ್ಯಕ್ಷರು, ವಕೀಲರ ಸಂಘ, ಆಥಣಿ, ಆರ್ ಪಿ ಹಗೆದ. ಉಪಾಧ್ಯಕ್ಷರು ವಕೀಲರ ಸಂಘ, ಅಥಣಿ, ಸಿ. ಕೆ ಬಾಗಿ, ಪ್ರಧಾನ ಕಾರ್ಯದರ್ಶಿಗಳು,ವಕೀಲರ ಸಂಘ, ಅಥಣಿ ಡಿ ಹಿರೇಮಠ, ಕೋಶಾಧಿಕಾರಿ ವಕೀಲರ ಸಂಘ, ಅಥಣಿ, ಏನ್ ಪಿ ಬಾಬರ, ಜಂಟಿ ಕಾರ್ಯದರ್ಶಿಗಳು,ವಕೀಲರ ಸಂಘ, ಅಥಣಿ ಶ್ರೀಮತಿ. ಜಿ ಬಿ ಕಾಂಬಳೆ. ಮಹಿಳಾ ಪ್ರತಿನಿಧಿ, ವಕೀಲರ ಸಂಘ, ಅಥಣಿ, ಶ್ರೀಮತಿ : ಎ ಬಿ ಗುಳಿದರೆ ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಎಂ. ಬಿ ಸೌಂದಲಗೇಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸ್ವಾಗತಿಸಿದರು. ರುಬಿಯ ಮುಜಾವರ್ ನಿರೂಪಿಸಿ ವಂದಿಸಿದರು.
ವರದಿ : ಸುಕುಮಾರ್ ಮಾದರ




