Ad imageAd image

ಗಣೇಶ ಹಬ್ಬ,ಈದ ಮಿಲಾದ ಶಾಂತಿ ಸೌಹಾರ್ದತೆಗಾಗಿ ರೂಟ್ ಮಾರ್ಚ

Bharath Vaibhav
ಗಣೇಶ ಹಬ್ಬ,ಈದ ಮಿಲಾದ ಶಾಂತಿ ಸೌಹಾರ್ದತೆಗಾಗಿ ರೂಟ್ ಮಾರ್ಚ
WhatsApp Group Join Now
Telegram Group Join Now

ಗೋಕಾಕ :ನಗರದಲ್ಲಿ ಗೌರಿ,ಗಣೇಶ ಹಾಗೂ ಈದ ಮಿಲಾದ್ ಹಬ್ಬಗಳ ಬಂದೋಬಸ್ತ,ಶಾಂತಿ ಸೌಹಾರ್ದತೆ ಕಾಪಾಡಲು ಬೆಳಗಾವಿ ಎಸ್ಪಿ ಆದೇಶದಂತೆ ಡಿಎಸಪಿ ರವಿ ನಾಯಕ ಮಾರ್ಗದರ್ಶನದಲ್ಲಿ ಸಿಪಿಆಯ್ ಸುರೇಶಬಾಬು ಸಾರಥ್ಯದಲ್ಲಿ ಹಾಗೂ ಗ್ರಾಮೀಣ ಪಿಎಸ್ಐ ಕಿರಣ ಮೊಹಿತೆ ನೇತೃತ್ವದಲ್ಲಿ 200 ರ್ಯಾಪಿಡ್ ಆಕ್ಸನ್ ಪೊರ್ಸ್ ಮತ್ತು ಪೋಲಿಸ್ ಸಿಬ್ಬಂದಿಗಳು ರೂಟ ಮಾರ್ಚ ನಡೆಸಿದರು.

ಗಣೇಶ ವಿಸರ್ಜನೆ ಸಮಯದಲ್ಲಿ ಮೆರವಣಿಗೆಗಳು ಸಾಗುವ ಪ್ರಮುಖ ಸ್ಥಳ, ಸೂಕ್ಷ್ಮ, ಅತೀ ಸೂಕ್ಷ್ಮ ಸ್ಥಳಗಳು ಹಾಗೂ ವಿವಿಧ ಪ್ರದೇಶಗಳಲ್ಲಿ ನಗರ ಠಾಣೆಗಳ ವ್ಯಾಪ್ತಿಯ ಪ್ರಮುಖ ಸೂಕ್ಷ್ಮ, ಅತಿ ಸೂಕ್ಷ್ಮ ಸ್ಥಳ ಮತ್ತು ಪ್ರದೇಶಗಳಲ್ಲಿ ಮೆರವಣಿಗೆಗಳು ಸಾಗುವ ಸ್ಥಳ, ಮಾರ್ಗಗಳಲ್ಲಿ ಪೊಲೀಸ್ ಅಧಿಕಾರಿ ನಡೆಸಿದರು.

ಸಮಾಜದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಭದ್ರತೆ ಹಿತದೃಷ್ಟಿಯಿಂದ ಕಾಲ್ನಡಿಗೆಯಲ್ಲಿ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ರೂಟ ಮಾರ್ಚ ಸಂಗೊಳ್ಳಿ ರಾಯಣ್ಣನ ಸರ್ಕಲ್,ಅಪ್ಸರಾ ಕೂಟ,ತಂಬಾಕ ಕೂಟ,ಬ್ಯಾಳಿ ಕಾಟಾ, ವಾಲ್ಮೀಕಿ ಕ್ರೀಡಾಂಗಣದಲ್ಲಿ ರೂಟ್ ಮಾರ್ಚ್ ನಡೆಸಿದರು.

ನಗರ ಪೊಲೀಸ್ ಅಧಿಕಾರಿ ರವಿ‌ ನಾಯಕ ಇವರು ಸಿಬ್ಬಂದಿಯವರ ಜೊತೆ ಬಂದೋಬಸ್ತ್ ಸಂಬಂಧ ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಕುರಿತು ಸಮಾಲೋಚಿಸಿ ಸೂಕ್ತ ಸಲಹೆ, ಸೂಚನೆ ಮತ್ತು ತಿಳುವಳಿಕೆಗಳನ್ನು ನೀಡಿದರು.ನಗರದ ಪ್ರಮುಖ ಸೂಕ್ಷ್ಮ ಸ್ಥಳಗಳಲ್ಲಿ ರೂಟ್ ಮಾರ್ಚ್ ನಡೆಸಿ ಬಂದೋಬಸ್ತ್ ಸಂಬಂಧ ಸೂಕ್ತ ಕ್ರಮವಹಿಸಲಾಗುತ್ತಿದೆ ಎಂದರು\

ನಂತರ ಪೋಲಿಸ್ ಇಲಾಖೆಯಿಂದ ಸಿಬ್ಬಂದಿಗಳಿಗೆ ಅಲ್ಪೊಪಹಾರದ ವ್ಯವಸ್ತೆ ಮಾಡಲಾಗಿತ್ತು.

ವರದಿ:ಮನೋಹರ ಮೇಗೇರಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!