ದಿ. 29.8.25 ರಂದು ಯಲಹಂಕದ ಅಟ್ಟೂರಿನಲ್ಲಿ ಗಣೇಶ ಹಬ್ಬದ ಪ್ರಯುಕ್ತ ಮೊದಲಿಗೆ ಭಕ್ತ ಪ್ರಹ್ಲಾದ ಎಂಬ ಕಿರು ನಾಟಕ ಮತ್ತು ಹೆಂಗಸರಿಂದ ಜನಪದ ಗೀತೆಗೆ ನೃತ್ಯ ಪ್ರದರ್ಶನ ಮತ್ತು 29. 8:25 ರಂದು ಲವ ಕುಶರು ಹಾಡಿದ ರಾಮಾಯಣದ ಒಂದು ತುಣುಕು ಮತ್ತು ಗುರು ಶಿಷ್ಯರು ಎಂಬ ಚಿತ್ರದಿಂದ ಹಾರಿಸಿದ ಹಾಸಿಮಯ್ಯ ಹಾಡಿಗೆ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಮಾಡಿರುತ್ತಾರೆ ಇದು ನಮ್ಮ ಬಡಾವಣೆಯಲ್ಲಿ ಅತ್ಯಂತ ಸುಂದರವಾದ ಸೊಗಸಾದ ಅದ್ಭುತವಾದ ಮರೆಯಲಾಗದ ಒಂದು ಕಾರ್ಯಕ್ರಮವಾಗಿರುತ್ತದೆ.

ಅಲ್ಲದೇ ಹಿರಣ್ಯಕಶ್ಯಪನ ಆಗಿ ಮುತ್ತುರಾಜ್ ಸರ್ ಉಗ್ರ ನರಸಿಂಹರಾಗಿ ಶ್ರೀನಿಧಿ ಸರ್ ಭಕ್ತ ಪ್ರಹಲಾದನಾಗಿ ಅರ್ಜುನ್ ಎಂಬುವರು ನಾಟಕದಲ್ಲಿ ಪಾತ್ರವನ್ನು ಮಾಡಿರುತ್ತಾರೆ, ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬರಲು ಕಾರಣ ನಿವೃತ್ತ ದೈಹಿಕ ಶಿಕ್ಷಕ ವಿ ರಾಮಚಂದ್ರ ಹಾಗೂ ಎಲ್ಲಾ ಅಟ್ಟೂರ್ ಬಡವನೆಯವರು.
ವರದಿ :ಯಾರಬ್. ಎಂ.




