ರಾಯಚೂರು: ವಾರದ ಹಿಂದೆ ಕಾಣೆಯಾಗಿದ್ದ ನಗರದ ಗಾಜಗಾರಪೇಟೆ ನಿವಾಸಿ ಮಂಜುನಾಥ (32) ಕೊಳೆತ ಶವದ ರೂಪದಲ್ಲಿ ಪತ್ತೆಯಾದ ಘಟನೆ ನೇತಾಜಿ ನಗರದಲ್ಲಿ ನಡೆದಿದೆ.
ಒಂದು ವಾರದಿಂದ ಮನೆಗೆ ಬಂದಿರದ ಕಾರಣಕ್ಕೆ ಕುಟುಂಬ ಸದಸ್ಯರು ಠಾಣೆಗೆ ನಾಪತ್ತೆಯಾಗಿದ್ದಾನೆ ಎಂದು ದೂರು ನೀಡಲಾಗಿತ್ತು. ಯುವಕನ ಶವ ಕೊಳತು ದುರ್ವಾಸನೆ ಬಂದಾಗಲೇ ಗೊತ್ತಾಗಿದೆ. ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಸಾಮಗ್ರಿ ಸಂಗ್ರಹಿಸುವ ಕೊಟ್ಟಿಗೆ ರೂಪದ ಕೋಣೆಯಲ್ಲಿ ಶವ ಪತ್ತೆಯಾಗಿದೆ. ಮಂಜುನಾಥ ಹಿಟ್ಟಿನ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ.
ಮೃತನಿಗೆ ಹೆಂಡತಿ ಇಬ್ಬರು ಮಕ್ಕಳಿದ್ದಾರೆ. ರಾಯಚೂರಿನ ನೇತಾಜಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ




