ಅರಸೀಕೆರೆ: ತಾಲೂಕು ಕಚೇರಿಯಲ್ಲಿ ರೈತರ ಸಮಸ್ಯೆಗಳಿಗೆ ಸಕಾಲದಲ್ಲಿ ಸೇವೆ ದೊರಕುತ್ತಿಲ್ಲ ಎಂದು ಹಾಸನ ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದಯಾನಂದ್ ಹಲವಾರು ರೈತರೊಂದಿಗೆ ಆರೋಪ ವ್ಯಕ್ತಪಡಿಸಿದರು ಇಂದು ಅರಸಿಕೆರೆ ತಾಲೂಕ ಕಚೇರಿಯ ಆವರಣದಲ್ಲಿ ಮಾತನಾಡಿದ ಅವರು ಹಲವಾರು ವರ್ಷಗಳಿಂದಲೂ ಸಹ ಖಾತೆಗಳು ಆಗುತ್ತಿಲ್ಲ ತಾಲೂಕ ಕಚೇರಿಯ ಭೂದಾ ಕಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಮಯಕ್ಕೆ ಸರಿಯಾಗಿ ರೈತರಿಗೆ ಸ್ಪಂದಿಸಲಾಗುತ್ತಿಲ್ಲ ರೈತರಿಗೆ ತಾಲೂಕಛೇರಿಯಲ್ಲಿ ಸಿಗುವ ಸೇವೆಗಳ ವಿಳಂಬ ಹೀಗೆ ಮುಂದುವರೆದರೆ ತಾಲೂಕ ಕಚೇರಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ದಯಾನಂದ್ ತಿಳಿಸಿದರು.
ರೈತ ಸಂಘದ ಮುಖಂಡರೊಂದಿಗೆ ಹಲವಾರು ರೈತರು ಸುಮಾರು ವರ್ಷಗಳಿಂದ ಕಚೇರಿ ಅಲೆಯುತ್ತಿದ್ದೇವೆ ನಮ್ಮ ಕೆಲಸಗಳು ಆಗುತ್ತಿಲ್ಲ ಎಂದು ಮಾಧ್ಯಮದೊಂದಿಗೆ ಮಾತನಾಡಿದರು. ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ಕೊಟ್ರೇಶ್. ಕಾರೆಹಳ್ಳಿ ಜಿಲ್ಲಾ ಯುವ ಘಟಕದ ಉಪಾಧ್ಯಕ್ಷರಾದ ರವಿ ನಾಯಕ. ಸೇರಿದಂತೆ ಹಲವಾರು ರೈತರು ಉಪಸ್ಥಿತರಿದ್ದರು
ತಾಲೂಕ್ ತಹಸಿಲ್ದಾರ್ ಹಾಗೂ ತಾಲೂಕ ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ ರವರು ರೈತ ಸಂಘದ ಮುಖಂಡರು ಮತ್ತು ರೈತರನ್ನು ತಮ್ಮ ಕಚೇರಿಯಲ್ಲಿ ಸಮಸ್ಯೆಗಳನ್ನು ಕುಲಂಕುಶವಾಗಿ ಪರಿಶೀಲಿಸಿ ಶೀಘ್ರದಲ್ಲಿ ಪರಿಹರಿಸಿಕೊಡಲಾಗುವುದು ಸಂಬಂಧಪಟ್ಟವರಿಗೆ ದೂರವಾಣಿ ಮುಖಾಂತರ ಸಮಸ್ಯೆಗಳಿಗೆ ಕೂಡಲೇ ಪರಿಹಾರ ಕಲ್ಪಿಸಬೇಕೆಂದು ಸೂಚಿಸಿದರು
ಜಿಲ್ಲಾ ರೈತ ಸಂಘದ ಅಧ್ಯಕ್ಷರಾದ ದಯಾನಂದ್ ತಾಲೂಕ್ ಕಚೇರಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ರೈತರ ದಾಖಲೆಗಳು ಹಾಗೂ ಸರ್ವೆ ಕಾರ್ಯ ವಿಳಂಬವಾಗುತ್ತಿದೆ ಎಂದು ತಹಸಿಲ್ದಾರ್ ಅವರ ಗಮನಕ್ಕೆ ತಂದರು.
ವರದಿ:ರಾಜು ಅರಸೀಕೆರೆ




