ಸೇಡಂ : ದಿ.11.9.2025ರ ಗುರುವಾರದಂದು ಕೋಡ್ಲಾ ಹತ್ತಿರ ರಸ್ತೆ ತಡೆಹಿಡಿದು ಪ್ರತಿಭಟನೆ, ಈ ಪ್ರತಿಭಟನೆಯ ಉದ್ದೇಶ ಸೇಡಂ ದಿಂದ ಯಾದಗಿರಿಗೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು ದಿನಾಲು ದ್ವಿಚಕ್ರ ವಾಹನಗಳು ಶಾಲೆಯ ವಿದ್ಯಾರ್ಥಿಗಳು ಸರ್ಕಾರಿ ನೌಕರಸ್ಥರು. ಯಾದಗಿರಿ ರಸ್ತೆಗೆ ಕಲ್ಕಂಬ, ಅಳ್ಳೊಳ್ಳಿ, ಬೆನಕನಹಳ್ಳಿ ,ಕೊಡ್ಲಾ, ಮುಸ್ಟಳ್ಳಿ,ನಾಮವಾರ, ಹಂದರಕಿ, ಗೌಡನಹಳ್ಳಿ, ಭೀಮನಹಳ್ಳಿ, ಬಾರಗೀಡ ಗೇಟ, ಯಡ್ಡಳ್ಳಿ, ಹತ್ತಿಕುಣಿ, ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ ಇದು ಅಲ್ಲದೆ ಸೇಡಂ ದಿಂದ ಕಲ್ಬುರ್ಗಿ ಹೋಗುವ ರಸ್ತೆ ಸಹ ತುಂಬಾ ಅದು ಗಟ್ಟಿದ್ದು ಆ ರಸ್ತೆಗೆ ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ತುಂಬಾ ತೊಂದರೆ ಆಗುತ್ತಿದೆ, ಆದ್ದರಿಂದ ಸೇಡಂ ಕಲ್ಬುರ್ಗಿ ರಸ್ತೆ ಸಹ ಸುಧಾರಣೆ ಮಾಡಬೇಕು ಹಾಗೂ ಕೊಡ್ಲಾ ಗ್ರಾಮ ಮತ್ತು ಆಡಿಕಿ ಗ್ರಾಮಗಳಲ್ಲಿ ಆಧಾರ್ ಕೇಂದ್ರಗಳು ವರ್ಷಾನುಗಟ್ಟಲೆ ಸ್ಥಗಿತಗೊಂಡಿವೆ, ಅತಿ ಶೀಘ್ರದಲ್ಲೇ ಪುನರಾರಂಭಿಸಬೇಕು ಎಂದು ಕೊಡ್ಲಾ ಗ್ರಾಮದ ಬಸವೇಶ್ವರ ವೃತ್ತದ ಹತ್ತಿರ ರಸ್ತೆ ತಡೆ ಹಿಡಿದು ಪ್ರತಿಭಟನೆ ಮಾಡಲಾಗುತ್ತಿದೆ.
ಪ್ರತಿಭಟನೆ ಸ್ಥಳಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಜಿ.ವಿ.ಆ.ರ್. ವ್ಯವಸ್ಥಾಪಕರು ತಾಲೂಕ ದಂಡಾಧಿಕಾರಿಗಳು ಸ್ಥಳಕ್ಕೆ ಬಂದು ಮನವಿ ತೆಗೆದುಕೊಂಡು ಆಶ್ವಾಸನೆ ನೀಡುವವರೆಗೆ ಯಾವುದೇ ಕಾರಣಕ್ಕೆ ಪ್ರತಿಭಟನೆ ಹಿಂದಕೆ ತೆಗೆದುಕೊಳ್ಳುವುದಿಲ್ಲವೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾ. ರಾಮಚಂದ್ರ ಗುತ್ತೇದಾರ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ವ್ಯಕ್ತಪಡಿಸಿದ್ದಾರೆ.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




