ಐಗಳಿ : ಅಥಣಿ ವಿಜಯಪೂರ ರಾಜ್ಯ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನ ಅರಟಾಳ ಕ್ರಾಸ್ ಹತ್ತಿರ ಅಪಘಾತ ಸಂಬವಿಸಿದೆ. ಡಿಸೈಲ್ ಮುಗಿದು ನಿಂತದ ಗುಡ್ಸ ವಾಹನಕ್ಕೆ ದ್ವಿಚಕ್ರ ವಾಹನ ಸವಾರ ಗುದ್ದಿದ ಪರಿಣಾಮವಾಗಿ ತೆಲೆಗೆ ಮತ್ತು ಕೈಗೆ ಭಾರಿ ಗಾಯವಾಗಿದೆ.
ಇದೆ ಸಮಯದಲ್ಲಿ ಅಥಣಿ ಮಾಜಿ ಶಾಸಕರು ಶಹಜಹಾನ್ ಡೊಗರಗಾಂವ ಅವರು ಅಥಣಿಯಿಂದ ವಿಜಯಪುರಕ್ಕೆ ಹೊರಟಿದ್ದರು ಅಪಘಾತವಾಗಿದನ್ನು ನೋಡಿ ಅಪಘಾತಕ್ಕೆ ಈಡಾದ ವ್ಯಕ್ತಿಯನ್ನು ಉಪಚರಿಸಿ ರಕ್ಷಿಸಲು ತಾವೇ ಹಾಯವೇ ಅಂಬುಲೆನ್ಸ್ ಗೆ ಫೋನ್ ಮಾಡಿ ಕರೆಸಿ ತಾವೇ ಅವರನ್ನು ಎತ್ತಿ ಅಂಬುಲೆನ್ಸ್ ನಲ್ಲಿ ಹಾಕಿ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಕಳಿಸಿಕೊಟ್ಟ ಮಾನವೀಯತೆ ಮರೆದ್ದಿದ್ದಾರೆ ಇವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಐಗಳಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ವರದಿ : ಆಕಾಶ ಮಾದರ




