ಸಿಂಧನೂರು : ಸೆ.4 ನಗರದ ಮಿಲಾಪ್ ಶಾದಿ ಮಹಲ್ ನಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ದ್ವನಿ ಬೆಂಗಳೂರು ಹಾಗೂ ತಾಲೂಕ ಸಮಿತಿ ಸಿಂಧನೂರು ವತಿಯಿಂದ ಎರಡು ದಿನಗಳ ಕಾಲ ನಡೆದ ಪತ್ರಿಕಾ ಕಾರ್ಯಗಾರ ಹಾಗೂ ನೂತನ ಕಾ.ನಿ.ಪ ದ್ವನಿ ಸಂಘಟನೆಯ ಪದಗ್ರಹಣ ಕಾರ್ಯಕ್ರಮವು ದಿ! ಪತ್ರಕರ್ತರದ ಶರಣೆಗೌಡ ಗೊರೆಬಾಳ ಹಾಗೂ ಶರಣು. ಪಾ ಹಿರೇಮಠ ರವರ ವೇದಿಕೆಯಲ್ಲಿ ಪೂಜ್ಯರು ಮತ್ತು ಗಣ್ಯ ಮಾನ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ನೆರವೇರಿತು
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಪರಮಪೂಜ್ಯ ಗಪೂರ್ ಅಬ್ಬಾಸ್ ಅಲಿ ತಾತನವರು ಶ್ರೀ ಕ್ಷೇತ್ರ ಗೋನವಾರ ಹಾಗೂ ಪರಮಪೂಜ್ಯ ಶ್ರೀ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು ಮೂರು ಕ್ಯಾಂಪ್ ಸಿಂಧನೂರು ಹಾಗೂ ಶ್ರೀ ಹಜರತ್ ಸೋಪಿ ಸೈಯದ್ ಲಾಲ್ ಶಾ ಪೀರ್ ಖಾದ್ರಿ ಮುಳಗುಂದ ಮತ್ತು ಫಾದರ್ ರಾಯಪ್ಪ ಕಂದಳ್ಳಿ ಸಂತ ಫ್ರಾನ್ಸಿಸ್ ಅಸಿಸ್ ದೇವಾಲಯ ಜವಳಗೇರಾ ರವರು ವಹಿಸಿಕೊಂಡಿದ್ದರು.
ಕಾರ್ಯಕ್ರಮ ಉದ್ಘಾಟನೆ ಶ್ರೀ ಹಂಪನಗೌಡ ಬಾದರ್ಲಿ ಶಾಸಕರು ಸಿಂಧನೂರು ಅಧ್ಯಕ್ಷತೆ ವೆಂಕಟೇಶ್ ನಾಯಕ ಕಾ ನಿ ಪ ಧ್ವನಿ ತಾಲೂಕಾಧ್ಯಕ್ಷರು ಪ್ರಸ್ತಾವಿಕ ನುಡಿ ಸನ್ಮಾನ್ಯ ಶ್ರೀ ಮಲ್ಲಿಕಾರ್ಜುನ್ ಬಂಗ್ಲೆ ರಾಜ್ಯಾಧ್ಯಕ್ಷರು ಕಾ ನಿ ಪ ಬೆಂಗಳೂರು ಕಾರ್ಯಕ್ರಮದ ನಿರೂಪಣೆ ಶ್ರೀ ಸೈಯದ್ ಬಂದೇನೇ ವಾಜ್ ಕಾ ನಿ ಪ. ಪ್ರ. ಕಾರ್ಯದರ್ಶಿ ಮುಖ್ಯ ಅತಿಥಿಗಳು ಸೈಯದ್ ಅಬ್ದುಲ್ ಗನಿ ಜಿಲ್ಲಾಧ್ಯಕ್ಷರು ಕಾನಿಪ ಶ್ರೀಮತಿ ಮಂಜುಳಾ ಪ್ರಭುರಾಜ್ ಹಂಗಾಮಿ ಅಧ್ಯಕ್ಷರು ನಗರಸಭೆ ಸಿಂಧನೂರು. ಶ್ರೀ ಬಿಎಸ್. ತಳವಾರ ಡಿವೈಎಸ್ಪಿ ಸಿಂಧನೂರು. ಶ್ರೀ ಪಾಂಡುರಂಗ ಇಟಗಿ ಪೌರಾಯುಕ್ತರು ನಗರಸಭೆ ಸಿಂಧನೂರು. ಶ್ರೀ ಸೋಮನಗೌಡ ಬಾದರ್ಲಿ ಆರ್ಡಿಸಿಸಿ ಬ್ಯಾಂಕ್ ನಿರ್ದೇಶಕರು ಸಿಂಧನೂರು. ಶ್ರೀ ಬಸವರಾಜ ನಾಡಗೌಡ ಜೆಡಿಎಸ್ ತಾಲೂಕಾಧ್ಯಕ್ಷರು ಸಿಂಧನೂರು. ವೆಂಕೋಪ್ ನಾಯಕ್ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷರು ಸಿಂಧನೂರು. ಸಿದ್ದರಾಮೇಶ್ ಮನ್ನಾಪುರ ಬಿಜೆಪಿ ನಗರ ಮಂಡಲ ಅಧ್ಯಕ್ಷರು ಸಿಂಧನೂರು. ಎಚ್ ಎನ್. ಬಡಿಗೇರ್ ಮುಖಂಡರು ಅಲ್ಲಮಪ್ರಭು ಪೂಜಾರ್ ದಲಿತ ಮುಖಂಡರು ಸಿಂಧನೂರು. ಗುರುರಾಜ ಮುಕ್ಕುಂದ ದಲಿತ ಮುಖಂಡರು. ಅಮೀನ್ ಪಾಷಾ ದಿದ್ದಿಗಿ ರೈತ ಮುಖಂಡರು. ಆರ್ ಸಿ. ಪಾಟೀಲ್ ಪಾಟೀಲ್ ಶಿಕ್ಷಣ ಸಂಸ್ಥೆ. ಸುರೇಶ್ ಹಚ್ಚೋಳ್ಳಿ ಯುವ ಮುಖಂಡರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಕಾ ನಿ ಪ. ಧ್ವನಿ ಪದಾಧಿಕಾರಿಗಳಾದ ವಿಜಯಕುಮಾರ್. ಬಿ ಶರಣಬಸವ. ಬಸವರಾಜ ಬುಕ್ಕನಟ್ಟಿ. ಮೌನೇಶ್ ನಾಯಕ. ಗ್ಯಾನಪ್ಪ. ಸಿದ್ದರಾಮಪ್ಪ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಅನೇಕ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಿಂದ ಧ್ವನಿ ಸಂಘಟನೆ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ : ಬಸವರಾಜ ಬುಕ್ಕನಹಟ್ಟಿ




