Ad imageAd image

ಅರ್ಚಕನ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಎಲೆಕ್ಟ್ರಿಕ್ ಸಾಮಗ್ರಿ ಸೇರಿ ದಿನಸಿ ಸಾಮಾನುಗಳು ಬೆಂಕಿಗೆ ಆಹುತಿ.

Bharath Vaibhav
ಅರ್ಚಕನ ಮನೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್: ಎಲೆಕ್ಟ್ರಿಕ್ ಸಾಮಗ್ರಿ ಸೇರಿ ದಿನಸಿ ಸಾಮಾನುಗಳು ಬೆಂಕಿಗೆ ಆಹುತಿ.
WhatsApp Group Join Now
Telegram Group Join Now

ಸೇಡಂ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿದ್ದ ಎಲೆಕ್ಟ್ರಿಕ್ ಸಾಮಗ್ರಿ ಸೇರಿದಂತೆ ದಿನಸಿ ಪದಾರ್ಥಗಳು ಸುಟ್ಟು ಕರಕಲಾಗಿರುವ ಘಟನೆ ಸೇಡಂ ತಾಲ್ಲೂಕಿನ ಮಳಖೇಡ ಸ್ಟೇಷನ್ ತಾಂಡದಲ್ಲಿ ನಡೆದಿದೆ.

ಹಾರಕೂಡ ಚನ್ನಬಸವೇಶ್ವರ ದೇವಸ್ಥಾನ ಅರ್ಚಕ ಶಿವಕುಮಾರ್ ಸ್ಥಾವರಮಠ ಅವರ ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹಲವು ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

ಶುಕ್ರವಾರ ಮಧ್ಯರಾತ್ರಿ ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಈ ವೇಳೆ ಮನೆಯಲ್ಲಿದ್ದ ಟಿವಿ, ಮೊಬೈಲ್, ಎಲೆಕ್ಟ್ರಿಕ್ ವಸ್ತುಗಳು, ನಗದು ಹಣ ಬೆಂಕಿಗೆ ಆಹುತಿಯಾಗಿವೆ.

ವಿದ್ಯುತ್ ಅವಘಡದಿಂದ ನಷ್ಟ ಅನುಭವಿಸಿರುವ ಶಿವಕುಮಾರ್ ಅವರ ಮನೆಗೆ ಸಂಬಂಧಿಸಿದ ಸರ್ಕಾರಿ ಅಧಿಕಾರಿಗಳು ಭೇಟಿ ನೀಡಿ, ಪರಿಹಾರ ನೀಡಬೇಕೆಂದು ಮಳಖೇಡ ಗ್ರಾಪಂ ಸದಸ್ಯ ಉಮೇಶ್ ಚೌವ್ಹಾಣ್ ಆಗ್ರಹಿಸಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!